ಫುಟ್‌ಪಾತ್‌ಗಳಲ್ಲಿರುವ ಬೋರ್ಡ್ ಗಳ ತೆರವಿಗೆ ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ಉದ್ದಿಮೆದಾರರು ತಮ್ಮ ಅಂಗಡಿಗಳ ಬೋರ್ಡುಗಳನ್ನು ಪಾದಾಚಾರಿ ಮಾರ್ಗ/ ಫುಟ್‌ಪಾತ್‌ಗಳಲ್ಲಿ ಅಳವಡಿಸಬಾರದು.

ಫುಟ್‌ಪಾತ್‌ಗಳಲ್ಲಿ ಅಂಗಡಿಗಳ ಬೋರ್ಡುಗಳನ್ನು ಅಳವಡಿಸಿರುವುದು ಕಂಡುಬಂದಲ್ಲಿ, ನಗರಸಭೆಯ ವತಿಯಿಂದ ಯಾವುದೇ ಮುನ್ಸೂಚನೆ ನೀಡದೆ ಅಂತಹ ಬೋರ್ಡುಗಳನ್ನು ತೆರವುಗೊಳಿಸಿ, ಭಾರೀ ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.