ಉಡುಪಿ ಸೆನ್ ಅಪರಾಧ ಪೊಲೀಸರ ಕಾರ್ಯಾಚರಣೆ- 5 ಕಿಲೋ ಗಾಂಜಾ ವಶ, ಆರೋಪಿ ಬಂಧನ

ಉಡುಪಿ :  ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಷಾ ಜೇಮ್ಸ್ ಅವರ ನಿರ್ದೇಶನದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ ಮತ್ತು  ಸಿಬ್ಬಂದಿಯವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ , ಮಂಗಳವಾರ , ಉಡುಪಿ ತಾಲೂಕು ಶಿವಳ್ಳಿ ಗ್ರಾಮದ  ವಿದ್ಯಾರತ್ನ ನಗರದ,  ವಿದ್ಯಾರತ್ನ ಎನ್‍ಕ್ಲೇವ್ ಅಪಾರ್ಟ್‍ಮೆಂಟ್ ಬಳಿ, ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪ್ರಖರ್ ಶ್ರೀ ವಾಸ್ತವ್ ಎಂಬಾತನನ್ನು ದಸ್ತಗಿರಿಗೊಳಿಸಿ, ಈತನಿಂದ 1,30,000 ಮೌಲ್ಯದ 5 ಕಿಲೋ  280 ಗ್ರಾಂ ತೂಕದ ಗಾಂಜಾವನ್ನು ಮತ್ತು 5000 ಮೌಲ್ಯದ ಮೊಬೈಲ್ ಹ್ಯಾಂಡ್ ಸೆಟ್, 1250 ರೂ ಮೌಲ್ಯದ ತೂಕ ಸಾಧನ ಮತ್ತು 1000 ಮೌಲ್ಯದ ಟ್ರಾಲ್ ಬ್ಯಾಗ್ ಸೇರಿದಂತೆ ಒಟ್ಟು 1,36,250 ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ಸೀತಾರಾಮ ಪಿ ಮತ್ತು ಎ.ಎಸ್.ಐ. ಕೇಶವಗೌಡ ಹಾಗೂ ಸಿಬ್ಬಂದಿಗಳಾದ ಸತೀಶ್ ಬೆಳ್ಳೆ, ರಾಘವೇಂದ್ರ ಉಪ್ಪೂರು, ಕೃಷ್ಣ ಪ್ರಸಾದ್, ಸಂಜಯ್, ನಾಗೇಶ್, ಶ್ರೀಧರ್, ರಾಘವೇಂದ್ರ ಬ್ರಹ್ಮಾವರ, ಪ್ರಸನ್ನ ಸಾಲಿಯಾನ್, ಸಂತೋಷ ಖಾರ್ವಿ, ಪ್ರವೀಣ್ ಮತ್ತು ಜೀವನ್ ಪಾಲ್ಗೊಂಡಿದ್ದರು.