ಮಲ್ಪೆ: ಇಲ್ಲಿನ ಶಾಸಕಯಶ್ ಪಾಲ್ ಸುವರ್ಣ ಅವರು ಗುರುವಾರದಂದು ಕಡೆಕಾರ್ ಮತ್ತು ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೆರೆ ಭಾಗಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಭಾವ್ಯ ಕಡಲ್ಕೊರೆತ ಪ್ರದೇಶಗಳನ್ನು ಗುರುತಿಸಿ ಕಡಲ್ಕೊರೆತ ತಡೆಗೆ ಪೂರಕ ಕಾಮಗಾರಿಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಂದರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುತ್ಪಾಡಿ ಪಡುಕರೆಯಲ್ಲಿ ನಿರ್ಮಾಣಗೊಂಡಿರುವ ನೂತನ ಕೊಠಡಿಗೆ ಅಂಗನವಾಡಿಯನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ಮಲ್ಪೆ ಪಡುಕರೆಯ ನದಿದಂಡೆ ಸಂರಕ್ಷಣೆ ಕಾಮಗಾರಿಯ ಪರಿಶೀಲನೆ ನಡೆಸಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮಲ್ಪೆ ಸೆಂಟ್ರಲ್ ವಾರ್ಡಿನ ಶಾಂತಿನಗರದ 21 ಕುಟುಂಬಗಳ ಹಕ್ಕು ಪತ್ರದ ಮನವಿ ಸ್ವೀಕರಿಸಿದರು, ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಯೋಜನೆ ರೂಪಿಸುವಂತೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಪಡುಕರೆ ಬೀಚ್ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅರುಣ್ ಭಂಡಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ, ರೋಶನ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವ ಜನ ಸೇವಾ ಹಾಗೂ ಸಬಲೀಕರಣ ಇಲಾಖೆ, ಜಯರಾಜ್, ಸಹಾಯಕ ಅಭಿಯಂತರರು, ಬಂದರು ಮತ್ತು ಮೀನುಗಾರಿಕಾ ಇಲಾಖೆ, ಸಿದ್ದೇಶ್, ಪಿಡಿಒ, ಕಡೇಕಾರ್ ಗ್ರಾಮ ಪಂಚಾಯತ್, ಶ್ರೀಮತಿ ವಸಂತಿ, ಪಿಡಿಒ, ಅಂಬಲಪಾಡಿ ಗ್ರಾಮ ಪಂಚಾಯತ್, ಅಂಬಲಪಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೋಹಿಣಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಜೇಂದ್ರ ಪಂದುಬೆಟ್ಟು, ನಗರಸಭಾ ಸದಸ್ಯ ವಿಜಯ ಕುಂದರ್, ಪಂಚಾಯತ್ ಸದಸ್ಯ ವಸಂತ್ ಪ್ರವೀಣ್, ವೇದಾವತಿ, ಪ್ರಮೋದ್, ಸುಭಾಷಿಣಿ, ಸ್ಥಳೀಯರಾದ ಶಂಕರ್, ಭುವನ್, ನಾಗೇಶ್ ಬಂಗೇರ, ಗಣೇಶ್ ಬಂಗೇರ, ಪುರಂದರ ಕೋಟ್ಯಾನ್, ಹೇಮಂತ್ ಖಾರ್ವಿ, ವಸುಮತೀಶ್ ಮೊದಲಾದವರು ಉಪಸ್ಥಿತರಿದ್ದರು.