ಸಿದ್ದಕಟ್ಟೆ: ಸ.ಪ.ಪೂ ಕಾಲೇಜು ಸಿದ್ಧಕಟ್ಟೆ ಇಲ್ಲಿನ 2019-20 ನೇ ಸಾಲಿನ ವಿದ್ಯಾರ್ಥಿ ಸಂಘ, NSS, ರೇಂಜರ್ಸ್, ರೋವರ್ಸ್ ಘಟಕ, ಮತದಾರ ಸಾಕ್ಷರತಾ ಕ್ಲಬ್ ಗಳ ಉದ್ಘಾಟನೆಯು ಜೂ. 22 ರಂದು ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಗಬೆಟ್ಟು ಕ್ಷೇತ್ರದ ತಾ.ಪಂ ಸದಸ್ಯ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಪ್ರಭು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಮಾನವೀಯ ಸಂಬಂಧಗಳು, ಔದ್ಯೋಗಿಕ ಅವಕಾಶಗಳ ಕುರಿತು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸ.ಪ್ರ.ದರ್ಜೆ ಕಾಲೇಜು ವಾಮದಪದವು ಇಲ್ಲಿನ ಪ್ರಾಂಶುಪಾಲ ಪ್ರೊ.ಹರಿಪ್ರಸಾದ್ ಶೆಟ್ಟಿ ವಿದ್ಯಾರ್ಥಿಗಳಿಗೆ ಪೂರಕವಾಗುವ ಮಾತುಗಳನ್ನಾಡಿದರು
ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ರಮಾನಂದ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹೇಮಚಂದ್ರ, ಡಾ. ಸುದೀಪ್ ಕುಮಾರ್, ರಾಜೇಂದ್ರ ನೆಕ್ಲಾಜೆ, ಯೋಗೀಶ್ ಪೂಜಾರಿ ಕರ್ಪೆ, ಕೇಶವ ಪೂಜಾರಿ ಕಲ್ಕುರಿ, ಮಂದಾರತಿ.ಎಸ್.ಶೆಟ್ಟಿ, ವಸಂತಿ, ಶ್ರೀಮತಿ ಬೇಬಿ, ಗುಲಾಬಿ, ಉಮಾನಾಥ ನಾಯಕ್, ಯೋಜನಾಧಿಕಾರಿಯಾದ ಶೀನಪ್ಪ.ಎನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಉದಯ ಕುಮಾರ್ ಪ್ರಮಾಣ ವಚನ ಬೋಧಿಸಿದರು. ರೇಂಜರ್ಸ್ ಘಟಕದ ಅಧಿಕಾರಿ ಮಮತಾ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಉಪನ್ಯಾಸಕರಾದ ಶ್ರೀನಿವಾಸ್ ನಾಯ್ಕ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಪ್ರಿಯ ವಂದಿಸಿದರು. ಉಪನ್ಯಾಸಕರಾದ ಸಂಜಯ್ ಬಿ. ಎಸ್ ನಿರೂಪಿಸಿದರು.












