ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಸಿಟಿ ಬಸ್ಸ್ಟ್ಯಾಂಡ್ ನಿಂದ ಕಾಫಿಯಾ ಹೋಟೆಲ್
ವರೆಗೆ ಒಳಚರಂಡಿ ಜಾಲದ ಪೈಪ್ ಬದಲಾವಣೆ ಮಾಡಿ ಕಾಂಕ್ರೀಟ್ ಛೇಂಬರ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಸದರಿ ರಸ್ತೆಯಲ್ಲಿ ಜೂನ್ 15 ರ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬದಲಿ ವ್ಯವಸ್ಥೆಯಾಗಿ, ಸರ್ವಿಸ್ ಬಸ್ಸ್ಟ್ಯಾಂಡ್ ಎದುರಿನಿಂದ ಕೆ.ಎಸ್.ಆರ್.ಟಿ.ಸಿಬಸ್ಸ್ಟ್ಯಾಂಡ್ ಮಾರ್ಗವಾಗಿ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಗರಸಭೆಯ ಪೌರಾಯಕ್ತರ ಪ್ರಕಟಣೆ ತಿಳಿಸಿದೆ.