ಉಡುಪಿ: ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್ನ ಪೋಲ್ಯಾಂಡ್ ಮತ್ತು ಹಂಗೇರಿ ದೇಶಗಳಲ್ಲಿ ಭಾರೀ ಟ್ರಕ್ ಮತ್ತು ಟ್ರೇಲರ್ ಪುರುಷ ಮತ್ತು ಮಹಿಳಾ ಚಾಲಕರ ಹುದ್ದೆಗಳಿಗೆ ಬೇಡಿಕೆ ಬಂದಿದ್ದು, ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಕರ್ನಾಟಕದಿಂದ ನೇರ ನೇಮಕಾತಿ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಜೂನ್ 11 ರೊಳಗಾಗಿ ನೊಂದಣಿ ಮಾಡಿಕೊಳ್ಳಬಹುದು. 2009ರ ಸೆಪ್ಟಂಬರ್ 9 ಕ್ಕಿಂತ ಮೊದಲು ಕೊಡಲಾದ ಭಾರಿ ಟ್ರಕ್ ಟ್ರೇಲರ್ ಚಾಲಕ ಪರವಾನಿಗೆ ಹೊಂದಿರಬೇಕು ಮತ್ತು ಇಂಗ್ಲೀಷ್ ಭಾಷಾಜ್ಞಾನ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಂತರಾಷ್ಟ್ರೀಯ ವಲಸೆ ಮಹಿತಿ ಕೇಂದ್ರ-ಕರ್ನಾಟಕ ಅಥವಾ ಜಿಲ್ಲಾ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಉಡುಪಿ ದೂ.ಸಂ.0820-2574204,9148862638 ಅನ್ನು ಸಂಪಕಿಸಬಹುದಾಗಿದೆ.
















