ಶಿರಿಯಾರ ಗ್ರಾಮದ ಪದ್ಮಾವತಿ ನಾಯಕ್ ನಿಧನ

ಉಡುಪಿ: ಶಿರಿಯಾರ ಗ್ರಾಮದ ಕಲ್ಮರ್ಗಿಯ ನಿವಾಸಿ ದಿ| ಎಸ್. ಪದ್ಮನಾಭ ನಾಯಕ್ ಅವರ ಪತ್ನಿ ಪದ್ಮಾವತಿ ನಾಯಕ್ (92) ಅವರು ಜೂ. 1 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪುತ್ರರಾದ ಉದ್ಯಮಿ ಉಮೇಶ ನಾಯಕ್, ಐಒಸಿ ನಿವೃತ್ತ ಅಧಿಕಾರಿ ಸುರೇಂದ್ರ ನಾಯಕ್, ಜವುಳಿ ಉದ್ಯಮಿ ಗೋಪಾಲಕೃಷ್ಣ ನಾಯಕ್, ಕೈಗಾರಿಕೋದ್ಯಮಿ ಅನಂತ ನಾಯಕ್, ನ್ಯಾಯವಾದಿ ಶಿರಿಯಾರ ಪ್ರಭಾಕರ ನಾಯಕ್ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಅವರು ಶಿರಿಯಾರ ಜಿಎಸ್ ಸಿ ಸೇವಾ ಸಂಘದ ಪದಾಧಿಕಾರಿಯಾಗಿದ್ದರು. ಹಾಗೂ ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ನ ಹಿರಿಯ ಸಲಹೆಗಾರರಾಗಿದ್ದರು.