ಉಡುಪಿ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂಬರಲು ಸಹಾಯವಾಗುವಂತೆ ಜಿಲ್ಲೆಯಲ್ಲಿನ ಪ್ರತಿಷ್ಟಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶ ಕಲ್ಪಿಸಿ ಪಿಯುಸಿ ವ್ಯಾಸಂಗದವರೆಗೆ ಶಿಕ್ಷಣ ಕಲ್ಪಿಸಲು ಸರಕಾರದಿಂದ ಯೋಜನೆಯನ್ನು ರೂಪಿಸಲಾಗಿದೆ.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಉತ್ತಮ ಮೂಲಭೂತ ಸೌಕರ್ಯ, ಭೋದನೆ, ಗ್ರಂಥಾಲಯ, ಪ್ರಯೋಗಾಲಯ ,ಕ್ರೀಡಾ ಚಟುವಟಿಕೆ, ಕಳೆದ 3 ವರ್ಷಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಶೇ 100 ಫಲಿತಾಂಶ ಹೊಂದಿರುವ ಶಾಲೆಗಳನ್ನು ಪ್ರತಿಷ್ಠಿತ ಶಾಲೆಯನ್ನಾಗಿ ಗುರುತಿಸಿ ಮಾನ್ಯತೆ ನೀಡಲು ಅರ್ಹ ಸಂಸ್ಥೆಗಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂನ್ 2 ಕೊನೆಯ ದಿನ. ಅರ್ಜಿಗಳನ್ನು ಸಮಾಜ ಕಲ್ಯಾಣ ಇಲಾಖೆ ರಜತಾದ್ರಿ ಮಣಿಪಾಲ,ಉಡುಪಿ,ಕುಂದಾಪುರ ಹಾಗೂ ಕಾರ್ಕಳ ಇಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ರಜತಾದ್ರಿ ಮಣಿಪಾಲ, ದೂರವಾಣಿ ಸಂಖ್ಯೆ:0820-2574892 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.