ಕೆಳಪರ್ಕಳದಲ್ಲಿ ಕಾರುಗಳ ನಡುವೆ ಮುಖಾಮುಖಿ ಅಪಘಾತ: ಪ್ರಯಾಣಿಕರು ಅಪಾಯದಿಂದ ಪಾರು

ಕೆಳಪರ್ಕಳ ತಿರುವಿನಲ್ಲಿ ಕಾರುಗಳ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿದ ಘಟನೆ ಇಂದು ಸಂಜೆ 4 ಗಂಟೆಗೆ ನಡೆದಿದೆ.

ಪರ್ಕಳದಿಂದ ಮಣಿಪಾಲ ಕಡೆಗೆ ತೆರಳುತ್ತಿದ್ದ ಮಾರುತಿ ರಿಡ್ಜ್ ಕಾರು, ಮಣಿಪಾಲದಿಂದ ಪರ್ಕಳದ ಕಡೆಗೆ ಬರುತ್ತಿದ್ದ ಟಾಟಾ ನೆಕ್ಸನ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮಾರುತಿ ರಿಡ್ಸ್ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಟಾಟಾ ನೆಕ್ಸಾನ್ ಕಾರಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ. ಬಳಿಕ ಎರಡು ಕಾರಿನವರು ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.