ಕೊಡವೂರು: ಮನೆ ಮನೆಗೆ ನೀರು ವಿತರಿಸುವ ಮಾದರಿ ಕಾರ್ಯ

ಉಡುಪಿ: ನೀರಿನ ಕೊರತೆಯಿಂದಾಗಿ ನಗರಸಭೆ ವತಿಯಿಂದ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಕಾರ್ಯ ನಡೆಯುತ್ತಿದೆ. ಕೊಡವೂರು ವಾರ್ಡಿನಲ್ಲಿ ನೀರಿನ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಸಮಿತಿಯನ್ನು ರಚನೆ ಮಾಡಲಾಗಿದ್ದು, ನಾಗರಿಕರಿಗೆ ನೀರಿನ ಸಮಸ್ಯೆ ಬಂದಾಗ ತಿಳಿಸಿದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಕೊಡವೂರು ವಾರ್ಡಿನಲ್ಲಿ ನಡೆಯುತ್ತಿದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರಲ್ಲಿ ಅಚ್ಚುಕಟ್ಟಾದ ನಿರ್ವಹಣೆ ಕೊಡುವೂರಿನಲ್ಲಿ ನಡೆದಿದ್ದು ಪಂಪ್ ಆಪರೇಟರ್ ಆಗಿರುವಂದಾಮೋದರ್ ಮತ್ತು ನಿತೀಶ್ ಪಾಲಕಟ್ಟೆ ಇವರ ಕಾರ್ಯವು ಉತ್ತಮವಾಗಿ ನಡೆಯುತ್ತಿದೆ. ನೀರಿನ ಸಮಸ್ಯೆ ಇರುವವರು ಪೋನ್ ಮೂಲಕ ತಿಳಿಸಿದರೆ ಮರುದಿನ ಟ್ಯಾಂಕರ್ ಮೂಲಕ ಮನೆಗೆ ನೀರು ಪೂರೈಸುವ ಕಾರ್ಯ ನಗರಸಭಾ ಸದಸ್ಯ ವಿಜಯ್ ಕೊಡವೂರು ಇವರ ಮುಂದಾಳತ್ವದಲ್ಲಿ ನಡೆಯುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಂದಲ್ಲಿ, ಕಾರ್ಯಕರ್ತರಿಗೆ ತಿಳಿಸಿದರೆ ನೀರಿನ ವ್ಯವಸ್ಥೆ ಮಾಡುವ ಕಾರ್ಯ ಮಾಡಲಾಗುವುದು ಎಂದು ವಿಜಯ್ ಕೊಡವೂರು ತಿಳಿಸಿದ್ದಾರೆ.