ಕೆಮ್ಮಣ್ಣು: ದಿವಂಗತ ನಿತ್ಯಾನಂದ ಕೆಮ್ಮಣ್ಣು ಇವರ ದ್ವಿತೀಯ ವರ್ಷದ ಪುಣ್ಯಸ್ಮರಣೆಯನ್ನು ಕೆಮ್ಮಣ್ಣು ಸಂತ ತೆರೇಸಾ ಚರ್ಚಿನ ಹಾಲಿನಲ್ಲಿ ನಿತ್ಯಾನಂದ ಕೆಮ್ಮಣ್ಣು ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಕೆಮ್ಮಣ್ಣು ಪರಿಸರದಲ್ಲಿರುವ ನಾಲ್ಕು ವಿದ್ಯಾ ಸಂಸ್ಥೆಗಳ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದರ ಮೂಲಕ ಪುಣ್ಯ ಸ್ಮರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.
ಗ್ಲೋವಿಂಗ್ ಸ್ಟಾರ್ ಸಂಸ್ಥೆಗಳ ಮುಖ್ಯಸ್ಥ ಟಿ ಜೆ ಕ್ವಾಡ್ರಸ್, ಕೆಮ್ಮಣ್ಣು ಚರ್ಚಿನ ಧರ್ಮ ಗುರುಗಳಾದ ಫಾದರ್ ವಿಕ್ಟರ್ ಡಿಸೋಜಾ, ಯುವ ನಾಯಕ ಪ್ರಸಾದ್ ಕಾಂಚನ್ , ಕೆ ರಘುರಾಮ್ ಶೆಟ್ಟಿ , ವೇರೋನಿಕಾ ಕರ್ನೇಲಿಯೋ, ಡಾಕ್ಟರ್ ರಫೀಕ್, ರಾಮಪ್ಪ ಮಾಸ್ಟರ್, ಸಂಜೀವ ಗುರಿಕಾರ, ದಿನಕರ ಹೇರೂರು, ರಮೇಶ್ ಕಾಂಚನ್, ಅಮೃತ್ ಶೆಣೈ, ಪ್ರಖ್ಯಾತ ಶೆಟ್ಟಿ , ಕೀರ್ತಿ ಶೆಟ್ಟಿ, ರಾಘವೇಂದ್ರ ಕರ್ಜೆ ಮತ್ತು ಅವರ ಅನೇಕ ಅಭಿಮಾನಿ ಬಂಧುಗಳು, ಕರಾಟೆ ಪಟುಗಳು, ಕೆಮ್ಮಣ್ಣು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಹಾಗೂ ಅವರ ಕುಟುಂಬದ ಸದಸ್ಯರು ಹಾಜರಿದ್ದರು.