ಹೊಸ ಸಂಸತ್ ಕಟ್ಟಡದ ನೆನಪಿಗಾಗಿ 75 ರೂಪಾಯಿ ನಾಣ್ಯ ಬಿಡುಗಡೆ

ನವದೆಹಲಿ: ಭಾರತದ ಹೊಸ ಸಂಸತ್ ಕಟ್ಟಡದ ಲೋಕಾರ್ಪಣೆ ಸಂದರ್ಭದ ನೆನಪಿಗಾಗಿ ಮೋದಿ ಸರ್ಕಾರವು ರೂ 75 ನಾಣ್ಯವನ್ನು ಬಿಡುಗಡೆ ಮಾಡಲಿದೆ.

35 ಗ್ರಾಂ ತೂಗುವ ನಾಣ್ಯವು 44 ಎಂಎಂ ವ್ಯಾಸ ಹೊಂದಿದ್ದು ವೃತ್ತಾಕಾರದಲ್ಲಿರುತ್ತದೆ ಎಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ.

ನಾಣ್ಯದ ಮುಂಭಾಗದಲ್ಲಿ ಅಶೋಕ ಸ್ತಂಭದ ಸಿಂಹ ಲಾಂಛನ ಮತ್ತು ಅದರ ಕೆಳಗೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಗಿರಿ ಲಿಪಿಯಲ್ಲಿ ಬರೆಯಲಾಗಿದ್ದರೆ, ಬಲಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.

ರೂಪಾಯಿಯ ಚಿಹ್ನೆಯೊಂದಿಗೆ 75 ಅನ್ನು ಇಂಗ್ಲಿಷ್ ಅಂಕಿಗಳಲ್ಲಿ ಬರೆಯಲಾಗಿದೆ. ನಾಣ್ಯದ ಹಿಂಭಾಗದಲ್ಲಿ ಸಂಸತ್ತಿನ ಸಂಕೀರ್ಣದ ಚಿತ್ರವಿರುತ್ತದೆ. ನಾಣ್ಯದ ಮೇಲಿನ ಪರಿಧಿಯಲ್ಲಿ ‘ಸಂಸದ್ ಸಂಕುಲ್’ ಎಂದು ಬರೆಯಲಾಗಿದ್ದರೆ ಕೆಳಗಿನ ಪರಿಧಿಯಲ್ಲಿ ಇಂಗ್ಲಿಷ್ ನಲ್ಲಿ ‘ಸಂಸತ್ತಿನ ಸಂಕೀರ್ಣ’ ಎಂದು ಬರೆಯಲಾಗುತ್ತದೆ.

ಸಂಸದ್ ಸಂಕುಲ್ ನ ಕೆಳಗಡೆ ಇಂಗ್ಲೀಷ್ ಅಂಕಿಯಲ್ಲಿ 2023 ಎಂದು ನಮೂದಿಸಲಾಗುತ್ತದೆ.