ರಾಜ್ಯದ ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡನ್ನು ಜನರಿಗೆ ನೀಡಿದ್ದು, ಈ ಹಿನ್ನಲೆ “ಯುವನಿಧಿ” ಯೋಜನೆ ಜಾರಿಗೆ ಕೆಲವು ಷರತ್ತುಗಳನ್ನು ರಾಜ್ಯ ಸರಕಾರ ವಿಧಿಸಿದೆ.
ಗ್ಯಾರೆಂಟಿ ಕಾರ್ಡ್ ನಲ್ಲಿ ಹೇಳಿದ “ಯುವನಿಧಿ” ಯೋಜನೆವು ಪ್ರಶಕ್ತ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರ ನಿರುದ್ಯೋಗಿಗಳಿಗೆ ಮಾತ್ರ ಎರಡು ವರ್ಷಗಳಿಗೆ ಸೀಮಿತವಾಗಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಪದವೀಧರರಿಗೆ ಮಾಸಿಕ 3 ಸಾವಿರ ರೂ. ಡಿಪ್ಲೋಮಾ ತೇರ್ಗಡೆ ಯಾದವರಿಗೆ ಮಾಸಿಕ ಒಂದುವರೆ ಸಾವಿರ ರೂ. ಭತ್ಯೆ ಪಾವತಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದ್ದು, ಶನಿವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ಮಾತನಾಡಿದ ಸಿಎಂ, ಪ್ರಶಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಮತ್ತು ಡಿಪ್ಲೋಮಾ ಮುಗಿಸಿದವರು ಮಾತ್ರ “ಯುವನಿಧಿ” ಯೋಜನೆಯ ಫಲಾನುಭವಿಗಳು ಎಂದು ಹೇಳಿದ್ದಾರೆ.
ಹಾಗೂ ಈ ವಿಚಾರದ ಬಗ್ಗೆ ಮೊದಲ ಸಂಪುಟ ಸಭೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಾರಿಯಲ್ಲಿ ಹೋಗುವವರಿಗೆಲ್ಲ ನೀಡಲಾಗುವುದಿಲ್ಲ. ಅರ್ಹ ವ್ಯಕ್ತಿಗಳನ್ನು ಗುರುತಿಸಿ, ನಿಯಮಾವಳಿ ರೂಪಿಸಬೇಕು. ಹಣಕಾಸು ಲೆಕ್ಕಾಚಾರ ಮಾಡಿ ಬಳಿಕ ಅನುಷ್ಠಾನಕ್ಕೆ ತರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.