ಮಣಿಪಾಲ ರೋಟರಿ ವತಿಯಿಂದ 5 ಕ್ಷೇತ್ರಗಳ ಯೂತ್ ಐಕಾನ್ ಗಳ ಆಯ್ಕೆ

ಮಣಿಪಾಲ: ಮಣಿಪಾಲ ರೋಟರಿ 2022-23 ನೇ ಸಾಲಿನ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಕಲಿಕಾ ನ್ಯೂನತೆ ಪರಿಹಾರ, ಅಂಗಾಂಗ ದಾನ, ಜಲ ಯಾತ್ರೆ, ಮಹಿಳಾ ಸಬಲೀಕರಣ, ಇ-ತ್ಯಾಜ್ಯ ನಿರ್ವಹಣೆ ಈ ಮುಖ್ಯ ವಿಚಾರಗಳನ್ನು ಕೈಗೆತ್ತಿಕೊಂಡು ವಿವಿಧ ಸ್ಥರಗಳ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಿದೆ. ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಮೇಲೆ ಹೇಳಿದ ಐದು ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಮತ್ತು ಇತರರಿಗೆ ಸ್ಪೂರ್ತಿದಾಯಕವಾಗಿ ಕೆಲಸ ಮಾಡಿದ 18 ರಿಂದ 30 ವಯೋಮಾನದ ಯೂತ್ ಐಕಾನ್ ಗಳನ್ನು ಗುರುತಿಸಿ ಇದೇ ತಿಂಗಳು 19 ರಂದು ಮಣಿಪಾಲದಲ್ಲಿ ಆಯೋಜಿಸಲಾಗುತ್ತಿರುವ ಮಣಿಪಾಲ ರೋಟರಾಕ್ಟ್ ಸಮ್ಮೇಳನದಲ್ಲಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ.

ಈ ಮೇಲೆ ತಿಳಿಸಿದ ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಮಹತ್ವಪೂರ್ಣ ಕೆಲಸ ಮಾಡಿರುವ ಯುವ ಜನರನ್ನು ಆಯ್ಕೆ ಮಾಡಲಿದ್ದು ಸಾರ್ವಜನಿಕರು ಮಣಿಪಾಲ ರೋಟರಿಯ ಆಯ್ಕೆ ಸಮಿತಿ ವಾಟ್ಸಾಪ್ ಸಂಖ್ಯೆ 6362571412 ಗೆ ಯುತ್ ಐಕಾನ್ ಪ್ರಶಸ್ತಿಗೆ ತಮ್ಮ ಆಯ್ಕೆಯ ವ್ಯಕ್ತಿಗಳ ಹೆಸರನ್ನು, ಸಂಪರ್ಕ ಸಂಖ್ಯೆ, ಯಾವ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ ಇತ್ಯಾದಿ ವಿವರಗಳೊಂದಿಗೆ ಸೂಚಿಸಬಹುದು ಎಂದು ಮಣಿಪಾಲ ರೋಟರಿ ಅಧ್ಯಕ್ಷೆ ರೇಣು ಜಯರಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.