ನವದೆಹಲಿ: ನಾಲ್ಕು ವರ್ಷಗಳ ರಕ್ಷಣಾ ಸೇವೆಯನ್ನು ಪೂರ್ಣಗೊಳಿಸಿದ ಅಗ್ನಿವೀರ್ಗಳಿಗೆ ರೈಲ್ವೇ ನೇಮಕಾತಿಯಲ್ಲಿ ಹಲವಾರು ಸಡಿಲಿಕೆಗಳನ್ನು ನೀಡಲಾಗುತ್ತದೆ ಎಂದು ಇಲಾಖೆಯು ತಿಳಿಸಿದೆ.
ಅಗ್ನಿವೀರರಿಗೆ ರೈಲ್ವೇಯಲ್ಲಿನ ನೇರ ನೇಮಕಾತಿ ಕೋಟಾದ ವಿರುದ್ಧ ಲೆವೆಲ್ -1 ರಲ್ಲಿ ಶೇಕಡಾ ಹತ್ತರಷ್ಟು ಮತ್ತು ಲೆವೆಲ್ – 2 ಮತ್ತು ಮೇಲಿನ ನಾನ್ ಗೆಜೆಟೆಡ್ ಹುದ್ದೆಗಳಲ್ಲಿ ಐದು ಶೇಕಡಾ ಮೀಸಲಾತಿಯನ್ನು ಒದಗಿಸಲಾಗುವುದು. ಮಾತ್ರವಲ್ಲದೆ, ದೈಹಿಕ ದಕ್ಷತೆಯ ಪರೀಕ್ಷೆಯು ಅನ್ವಯವಾಗುವಲ್ಲೆಲ್ಲಾಅಗ್ನಿವೀರ್ಗಳಿಗೆ ಇದರಿಂದ ವಿನಾಯಿತಿಯನ್ನು ನೀಡಲಾಗುವುದು.
ವಿವಿಧ ಸಮುದಾಯಗಳಿಗೆ ಈಗಾಗಲೇ ನಿಗದಿಪಡಿಸಿದ ಅಸ್ತಿತ್ವದಲ್ಲಿರುವ ವಯಸ್ಸಿನ ಮಿತಿಗಿಂತ ಹೆಚ್ಚುವರಿಯಾಗಿ ಅಗ್ನಿವೀರ್ಗಳ ಮೊದಲ ಬ್ಯಾಚ್ಗೆ ಐದು ವರ್ಷ ಮತ್ತು ಅಗ್ನಿವೀರ್ಗಳ ನಂತರದ ಬ್ಯಾಚ್ಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.