ಬಜಗೋಳಿ: ಸತ್ಯನಾರಾಯಣ ಪೂಜೆಯಲ್ಲಿ ಮತದಾನ ಜಾಗೃತಿ

ಬಜಗೋಳಿ: ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣಾ ಪ್ರಯುಕ್ತ ಬಜಗೋಳಿಯಲ್ಲಿ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ವಿಶೇಷ ರೀತಿಯಲ್ಲಿ ಮತದಾನ ಜಾಗೃತಿ ನಡೆಯಿತು.

ಶ್ರಿಮತಿ ಶ್ರೀ ಜನಾರ್ದನ ಶೆಣೈ ಇವರ ಪುತ್ರ ಪ್ರತೀಶ್ ಹಾಗೂ ಶ್ರೀಮತಿ ಶ್ರೀ ದೇವಕಿ ಮತ್ತು ದಿ.ರಾಮನಾರಾಯಣ ಇವರ ಪುತ್ರಿ ರಕ್ಷಿತಾ ಇವರ ವಿವಾಹದ ಪ್ರಯುಕ್ತ ಬಜಗೋಳಿಯ “ಏಕದಂತ” ಸ್ವಗ್ರಹದಲ್ಲಿ ಮೇ9 ರಂದು ಸತ್ಯನಾರಾಯಣ ಪೂಜೆಯಲ್ಲಿ ಕಾರ್ಯಕ್ರಮದಲ್ಲಿ ಫೊಟೋ ಕಾರ್ನರ್ ನಲ್ಲಿ ಪೋಟೋ ಕ್ಲಿಕಿಸುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ರೀತಿ ಸುರೇಶ್ ಶೆಣೈ ಹಾಗೂ ಗಿರೀಶ್ ಶೆಣೈ ಅವರು ವಿಭಿನ್ನ ರೀತಿಯಲ್ಲಿ ಆಲೋಚನೆ ಮಾಡಿದ್ದಾರೆ.