ಉಡುಪಿ ಮೂಲದ ಡಾ| ಪದ್ಮಾ ಗಡಿಯಾರ್. ಕನ್ನಡಿಗರು ಹೆಮ್ಮೆ ಪಡುವಂತಹ ಉಡುಪಿ ಮಂದಿ ಕೂಡ ಖುಷಿ ಪಡುವಂತಹ ಸಾಧನೆ ತೋರಿರುವುದು ಗಮನಾರ್ಹ ಸಂಗತಿ. ಡಾ.ಪದ್ಮಾ ಗಡಿಯಾರ್ ಬ್ರಿಸ್ಬೇನ್‌ನಲ್ಲಿ 2018 ಅಕ್ಟೋಬರ್ ನಲ್ಲಿ ಯು.ಎಸ್. ಮೂಲದ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ ಸೌತ್ ಇಂಡಿಯಾ ಯೂನಿವರ್ಸಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮುಂಬರುವ ಆಗಸ್ಟ್‌ನಲ್ಲಿ ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ ನಡೆಯಲಿದ್ದು, ಆ ಸ್ಪರ್ಧೆಯಲ್ಲಿಯೂ ಕಿರೀಟ ಮುಡಿಗೇರಿಸಿಕೊಂಡು ದೇಶಕ್ಕೆ, ನಮ್ಮ ಉಡುಪಿಗೆ ಇವರು ಕೀರ್ತಿ ತರುತ್ತಾರೆ ಎನ್ನುವ ನಿರೀಕ್ಷೆ ಎಲ್ಲರದ್ದು.
2019ರ ಆಗಸ್ಟ್ ಮೊದಲ ವಾರದಲ್ಲಿ ಮೆಕ್ಸಿಕೋದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ ನಡೆಯಲಿದ್ದು, ಒಂದು ವಾರ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ಫೋಟೋಗ್ರಾಫಿ, ಹೆಲ್ತ್ ಅಂಡ್ ಫಿಟ್ನೆಸ್, ಪ್ರಶ್ನೋತ್ತರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಮಿಸೆಸ್ ಆಸ್ಟ್ರೇಲಿಯಾ, ಮಿಸ್ಸೆಸ್ ಸೌತ್ ಇಂಡಿಯಾ ಏಷ್ಯಾ ಸ್ಪರ್ಧೆಗಳು ಸ್ಪರ್ಧಿಸುತ್ತಿದ್ದಾರೆ. ಭಾರತದಿಂದ ಸ್ಪರ್ಧಿಸುತ್ತಿರುವ ಏಕೈಕ ಸ್ಪರ್ಧಿ ಯಾಗಿದ್ದೇನೆ. ಇಲ್ಲಿಯೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ ಎನ್ನುತ್ತಾರೆ ಪದ್ಮ ಗಡಿಯಾರ್.
ನಮ್ಮೂರವರನ್ನು ಗೆಲ್ಲಿಸಿ:
ಕರಾವಳಿಯ ಉಡುಪಿ ಮೂಲದ ಡಾ| ಪದ್ಮಾ ಗಡಿಯಾರ್ ಬ್ರಿಸ್ಬೇನ್‌ನಲ್ಲಿ 2018 ಅಕ್ಟೋಬರ್ ನಲ್ಲಿ ಯು.ಎಸ್. ಮೂಲದ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ ಸೌತ್ ಇಂಡಿಯಾ ಯೂನಿವರ್ಸಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮುಂಬರುವ ಆಗಸ್ಟ್‌ನಲ್ಲಿ ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ ನಡೆಯಲಿದ್ದು, ಆ ಸ್ಪರ್ಧೆಯಲ್ಲಿಯೂ ಕಿರೀಟ ಮುಡಿಗೇರಿಸಿಕೊಂಡು ದೇಶಕ್ಕೆ, ನಮ್ಮ ಉಡುಪಿಗೆ ಇವರು ಕೀರ್ತಿ ತರುತ್ತಾರೆ ಎನ್ನುವ ನಿರೀಕ್ಷೆ ಎಲ್ಲರದ್ದು ಹಾಗೂ ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ.
ಉಡುಪಿಯ ಪ್ರತಿಭೆಗೆ ವೋಟ್ ಮಾಡಿ : ಅಭಿಮಾನಿಗಳು
ಈ ಕೆಳಗಿನ ಲಿಂಕ್ ಬಳಸಿ ವೋಟ್ ಮಾಡುವ ಮೂಲಕ ಅತಿ ಹೆಚ್ಚಿನ ವೋಟ್ ಮಾಡಿ ಡಾ| ಪದ್ಮಾ ಗಡಿಯಾರ್ ಅವರನ್ನು ಗೆಲ್ಲಿಸಿ ಎನ್ನುವುದು ಅವರ ಅಭಿಮಾನಿ ಹಾಗೂ ಸ್ನೇಹಿತರ ಕೋರಿಕೆ. ಈ ಪ್ರತಿಭೆಗೆ ನಿಮ್ಮ ಪ್ರೋತ್ಸಾಹವಿರಲಿ.