ಪಕ್ಷ ಪ್ರಚಾರಕ್ಕೆ ಕರುನಾಡ ಸಿಂಘಂ ಖ್ಯಾತಿಯ ಅಣ್ಣಾಮಲೈ ಸಾಥ್: ಇಂದು ಕೇಸರಿ ಕಲರವ ಬೃಹತ್ ರೋಡ್ ಶೋ

ಉಡುಪಿ: ಇಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮತ್ತು ಕರ್ನಾಟಕದ ಸಿಂಘಂ ಖ್ಯಾತಿಯ ಅಣ್ಣಾಮಲೈ ನೇತೃತ್ವದಲ್ಲಿ ಬೃಹತ್ ರೋಡ್ ಶೋ ಏಳೂರು ಮೊಗವೀರ ಭವನದಿಂದ ಹೊರಟು ವಡಭಾಂಡೇಶ್ವರ ಬಲರಾಮ ದೇವಸ್ಥಾನವನ್ನು ತಲುಪಲಿದೆ. ಆ ಬಳಿಕ ನಡೆಯುವ ಬೃಹತ್ ಸಮಾವೇಶದಲ್ಲಿ ಕೆ. ಅಣ್ಣಾಮಲೈ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.