ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗ್ಬೇಕು– ಮಾಜಿ ಪ್ರಧಾನಿ ಹೆಚ್‌ಡಿ ದೇವೆಗೌಡ ತುಳುನಾಡಿನ ದೈವ, ದೇವರ ಮೊರೆ…!!

ಮಂಗಳೂರು: ತನ್ನ ಮಗ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಮಾಜಿ ಪ್ರಧಾನಿ, ಮಣ್ಣಿನ ಮಗ ಕಾಲಿಗೆ ಚಕ್ರ ಕಟ್ಟಿ ತಿರುಗಾಡುತ್ತಿದ್ದಾರೆ. ತನ್ನ ಇಳಿ ವಯಸ್ಸಿನಲ್ಲೂ ಆರೋಗ್ಯವನ್ನು ಲೆಕ್ಕಿಸದೆ ಮಗನಿಗಾಗಿ ಶ್ರಮಿಸುತ್ತಿದ್ದಾರೆ. ಇದರ ಜೊತೆಗೆ ತುಳುನಾಡಿನ ದೈವ-ದೇವರ ಮೊರೆ ಹೋದ ಮಾಜಿ ಪ್ರಧಾನಿ ಹರಕೆಯನ್ನೂ ಹೊತ್ತಿದ್ದಾರೆ.

ರಾಜ್ಯದಲ್ಲಿ ಚುನಾಚಣಾ ಕಾವು ಹೆಚ್ಚಾಗುತ್ತಿದ್ದು ಯಾರು ಶಾಸಕರಾಗುತ್ತಾರೆ, ಯಾವ ಪಕ್ಷಕ್ಕೆ ಬಹುಮತ ಬರುತ್ತೆ ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಜೆಡಿಎಸ್ (JDS) ವರಿಷ್ಠ ಮಾಜಿ ಪ್ರಧಾನಿ ಹೆಚ್‌ಡಿ ದೇವೆಗೌಡ  ಮಾತ್ರ ಈ ಬಾರಿ ತನ್ನ ಮಗನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂಬ ಛಲದಲ್ಲಿ ಇದ್ದಾರೆ. ಇದಕ್ಕೆಲ್ಲ ದೈವಬಲ ಬೇಕೆಂಬ ಕಾರಣಕ್ಕಾಗಿ ಇದೀಗ ದೈವ ದೇವರ ನೆಲೆಬೀಡು ಪರಶುರಾಮ ಸೃಷ್ಟಿಯ ತುಳುನಾಡಿನ ಮಣ್ಣಿಗೆ ಮಣ್ಣಿನ ಮಗ ಕಾಲಿಟ್ಟಿದ್ದಾರೆ.

ಮಂಗಳೂರು (Mangaluru) ಸೇರಿದಂತೆ ಕರಾವಳಿಯಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಿದ್ದರೂ ಇಲ್ಲಿ ಕೆಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್ ವರಿಷ್ಠ ದೇವೇಗೌಡ ಇಲ್ಲಿನ ದೈವ ದೇವರ ಮೊರೆ ಹೋಗಿದ್ದಾರೆ. ತನ್ನ ಮಗನನ್ನು ಈ ಬಾರಿ ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಿಸುವಂತೆ ದೈವ ದೇವರಲ್ಲಿ ಪ್ರಾರ್ಥಿಸಲು ಮಂಗಳೂರಿಗೆ ಬಂದಿದ್ದಾರೆ. ತನ್ನ ಆರೋಗ್ಯವನ್ನೂ ಲೆಕ್ಕಿಸದೆ ದೈವ, ದೇವರು ಹಾಗೂ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜೆಡಿಎಸ್ ಕರಾವಳಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಟಿಕೆಟ್ ಸಿಗದೆ ಜೆಡಿಎಸ್ ಸೇರಿದ್ದಾರೆ. ಕಾಂಗ್ರೆಸ್ ಟಿಕೆಟ್ ನೀಡದ ಮಂಗಳೂರು ಉತ್ತರ ಕ್ಷೇತ್ರದಲ್ಲೇ ಮೊಯಿದ್ದೀನ್ ಬಾವಾ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಬಾವಾ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲು ದೇವೇಗೌಡರು ಬಂದಿದ್ದರು