ಕಾರ್ಕಳದಲ್ಲಿ ಕಾಂಗ್ರೆಸ್ ಬೃಹತ್ ಕಾಲ್ನಡಿಗೆ ಜಾಥ, ಸಮಾವೇಶ 

ಕಾರ್ಕಳ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಾಲ್ನಡಿಗೆ ಜಾಥ ಹಾಗೂ ಬೃಹತ್ ಸಮಾವೇಶ ಸ್ವರಾಜ್ ಮೈದಾನದಿಂದ ಬಂಡಿ ಮಠ ಬಸ್ ನಿಲ್ದಾಣದವರೆಗೆ ಇಂದು ನಡೆಯಿತು.

ಸ್ವರಾಜ್ ಮೈದಾನದಿಂದ ಮಧ್ಯಾಹ್ನ 3 ಗಂಟೆಗೆ ಪ್ರಾರಂಭಗೊಂಡ ಬೃಹತ್ ಜಾಥ ಬಂಡಿಮಠ ಬಸ್ ನಿಲ್ದಾಣದವರೆಗೆ ಕಾಲ್ನಾಡಿಗೆಯಲ್ಲಿ ರೋಡ್ ಶೋ ಮೂಲಕ ಸಾಗಿ ಬಂದಿದೆ.

ಪಕ್ಷದ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಡಾಕ್ಟರ್ ಎಂ ವೀರಪ್ಪ ಮೊಯ್ಲಿ ಅಭ್ಯರ್ಥಿ ಮುನಿಯಾಲ್ ಉದಯ್ ಶೆಟ್ಟಿ ಮತ್ತು ಜಿಲ್ಲಾಧ್ಯಕ್ಷರಾದ ಅಶೋಕ್ ಕೊಡವೂರು ಹಾಗೂ ಪಕ್ಷದ ರಾಜ್ಯ ನಾಯಕರು ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು. ಕ್ಷೇತ್ರದಾದ್ಯಂತ ಪ್ರತಿ ಬೂತಿ ನಿಂದ 200 ಕ್ಕಿಂತಲೂ ಹೆಚ್ಚು ಜನ ಭಾಗವಹಿಸಿದ್ದರು.