ಉಡುಪಿ: ಟೆಲಿಗ್ರಾಂ ಆಯಪ್‌ನಲ್ಲಿ ಟಾಸ್ಕ್ ಲಿಂಕ್ ಕಳುಹಿಸಿ ಟಾಸ್ಕ್ ಕಂಪ್ಲೀಟ್ ಮಾಡಿದಲ್ಲಿ ಶೇ.30 ರಿಂದ 40 ಹೆಚ್ಚುವರಿ ಹಣ ನೀಡುವುದಾಗಿ ನಂಬಿಸಿ 5.9ಲ.ರೂ. ವಂಚಿಸಲಾಗಿದೆ.ಬಡಗಬೆಟ್ಟು ನಿವಾಸಿ ಗೋಪಾಲ (29) ವಂಚನೆಗೊಳಗಾದವರು.
ಎ.25 ರಿಂದ 27ರ ವರೆಗೆ ಒಟ್ಟು 5.90 ಲ.ರೂ. ಅನ್ನು ಆರೋಪಿಗಳ ವಿವಿಧ ಖಾತೆಗಳಿಗೆ ನೆಫ್ಟ್ ಮೂಲಕ ವರ್ಗಾಯಿಸಿಕೊಂಡು ಟಾಸ್ಕ್ ನೀಡದೆ ವಂಚಿಸಿದ್ದಾರೆ ಎಂದು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












