ಜೂನ್ 22 : ಮಹತ್ವದ ಕವಿ ದಿ.ರಮೇಶ ಹೆಗಡೆಯವರ ಗಜಲ್ ಸಂಕಲನ ಶಿರಸಿಯಲ್ಲಿ ಬಿಡುಗಡೆ

ಕರಾವಳಿ: ಮಹತ್ವದ ಕವಿ, ಜೀವನೋತ್ಸಾಹದ ಚಿಲುಮೆಯಂತಿದ್ದ ಶಿರಸಿಯ ರಮೇಶ ಹೆಗಡೆಯವರ ಗಜಲ್ ಸಂಕಲನ ಜೂನ್ 22 ರಂದು  ಶಿರಸಿಯ ನಯನ ಸಭಾಂಗಣದಲ್ಲಿ ಅನಾವರಣಗೊಳ್ಳಲಿದೆ‌.
ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಥೆಗಾರ ಡಾ. ಶ್ರೀಧರ ಬಳಗಾರ ರಮೇಶ ಹೆಗಡೆಯವರ ಕವಿತೆಗಳ ಕುರಿತು ಮಾತನಾಡಲಿದ್ದಾರೆ. ಡಾ.ಶಿವರಾಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಕುಮಟಾದ ಸ್ವಸ್ತಿ ಪ್ರಕಾಶನ ಪುಸ್ತಕ ಪ್ರಕಟಿಸಿದೆ.
ಸ್ಟಿಯೋ ಜೆನಿಸಿಸ್ ಇಂಪರ್ಪೆಕ್ಟಾ ಎಂಬ ಅತಿ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ರಮೇಶ ಹೆಗಡೆ ಜೀವನೋತ್ಸಾಹದ ಚಿಲುಮೆ. ಬಾಲ್ಯದಿಂದ ಇದುವರೆಗೂ (35- 40 ವಯಸ್ಸು)ಪುಟ್ಟ ಕೋಣೆಯೇ ಅವರ ಪ್ರಪಂಚ. ಎದ್ದು ಓಡಾಡಲೂ ಆಗದ ಸ್ಥಿತಿ. ಪ್ರತಿಯೊಂದಕ್ಕೂ ಬೇರೆಯವರನ್ನೇ ಅವಲಂಬಿಸಬೇಕಾದ ಜೀವನ ಅವರದಾಗಿತ್ತು.
ಆದರೆ ಇದಕ್ಕೆಲ್ಲ ಕುಗ್ಗದೆ ಓದು, ಬರವಣಿಗೆಯಲ್ಲೆ ಬದುಕು ಕಂಡಿದ್ದರು. ಇದುವರೆಗೆ ಅವರ ಆರು ಕವನ ಸಂಕಲನ ಪ್ರಕಟವಾಗಿದೆ. ಪುಟ್ಟ ಕೋಣೆಯಲ್ಲಿ ಮಲಗಿಕೊಂಡೆ ಪದವಿ ಪರೀಕ್ಷೆ ಬರೆದಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಉರ್ದು‌ ಭಾಷೆಗಳಲ್ಲಿ ಹಿಡಿತ ಅವರ ಶಕ್ತಿಯಾಗಿತ್ತು. ಇತ್ತೀಚಿಗೆ ತೀರ ಅನಾರೋಗ್ಯಕ್ಕೆ ತುತ್ತಾಗಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದರು