ಮಂಗಳೂರು: ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ದ್ವಿತೀಯ ಹಂತದ ಪರೀಕ್ಷೆಯಲ್ಲಿ ಬೆಂದೂರ್ವೆಲ್ ಸಿಟಿ ಆರ್ಕೇಡ್ ಬಿಲ್ಡಿಂಗ್ನಲ್ಲಿರುವ ಮಾರ್ಸ್ ಲರ್ನಿಂಗ್ ಸೆಂಟರ್ನ ಎಂ.ಬಿ. ಗ್ಯಾನ್ ತಮ್ಮಯ್ಯ 98.609 ಅಂಕ ಪಡೆದಿದ್ದು ಸಂಸ್ಥೆಯ ಒಟ್ಟು 4 ವಿದ್ಯಾರ್ಥಿಗಳು 96 ಕ್ಕಿಂತಲೂ ಅಧಿಕ ಅಂಕ ಗಳಿಸಿರುತ್ತಾರೆ.
ಶ್ರೀಕಾ ಆಳ್ವಾ 97.575 ಪರ್ಸೆಂಟೈಲ್, ತನಿಷ್ಕ್ 97.367 ಪರ್ಸೆಂಟೈಲ್, ಇಶಾನ್ ರೈನಾ 96.025 ಪರ್ಸೆಂಟೈಲ್ ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮಾರ್ಸ್ ಲರ್ನಿಂಗ್ ಸೆಂಟರ್ ನಿರ್ದೇಶಕಿ ಡಾ| ರೀನಾ ಆಳ್ವಾ ಸಂತಸ ವ್ಯಕ್ತಪಡಿಸಿದ್ದಾರೆ.