ಕಾರ್ಕಳ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಎಪ್ರಿಲ್ ತಿಂಗಳಿನಲ್ಲಿ ನಡೆಸಿದ ಎರಡನೇ ಹಂತದ ಜೆ.ಇ.ಇ ಮೈನ್ ಎರಡನೇ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ರಾಷ್ಟ್ರ ಮಟ್ಟದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಾದ ಉದ್ಭವ್ ಎಂ. ಆರ್. ಆಲ್ ಇಂಡಿಯಾ ರ‍್ಯಾಂಕಿಂಗ್ ಕ್ಯಾಟಗರಿ ವಿಭಾಗದಲ್ಲಿ 152 ನೇ ರ‍್ಯಾಂಕ್, ಜಾಗೃತಿ ಕೆ ಪಿ 158 ನೇ ರ‍್ಯಾಂಕ್ ಗಳಿಸಿದ್ದಾರೆ. ಕಾರ್ತಿಕ್ ಕೃಷ್ಣಮೂರ್ತಿ ಹೆಗಡೆ ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್‌ನೊಂದಿಗೆ ಒಟ್ಟು 98.4035 ಪರ್ಸಂಟೈಲ್ ಗಳಿಸಿದ್ದಾರೆ. ಉದ್ಭವ್ ಎಂ. ಆರ್. 97.8930 ಪರ್ಸಂಟೈಲ್, ಜಾಗೃತಿ ಕೆ ಪಿ 97.8402 ಪರ್ಸಂಟೈಲ್, ಶ್ರೇಯಸ್ ಎಸ್ ಚಿಕಾಲೆ 97.6936 ಪರ್ಸಂಟೈಲ್, ಜಾರ್ಜ್ ಜೋಸೆಫ್ 97.6545 ಪರ್ಸಂಟೈಲ್, ಅಭಯ್ ಎಸ್ ಎಸ್ 97.5012 ಪರ್ಸಂಟೈಲ್ ಹಾಗೂ ಸಾತ್ವಿಕ್ ಎಸ್ ಶೆಟ್ಟಿ 97.3316 ಪರ್ಸಂಟೈಲ್ ಪಡೆದು ದೇಶದ ಪ್ರತಿಷ್ಠಿತ ತಾಂತ್ರಿಕ ವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಸಂಸ್ಥೆಯ 23 ವಿದ್ಯಾರ್ಥಿಗಳು 95 ಕ್ಕಿಂತ ಹೆಚ್ಚು ಪರ್ಸಂಟೈಲ್, 52 ವಿದ್ಯಾರ್ಥಿಗಳು 90 ಕ್ಕಿಂತ ಹೆಚ್ಚು ಪರ್ಸಂಟೈಲ್ ಗಳಿಸಿರುತ್ತಾರೆ. ಒಟ್ಟು 152 ವಿದ್ಯಾರ್ಥಿಗಳು ಜೆ.ಇ.ಇ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವೃಂದದವರು ಹಾಗೂ ಜೆಇಇ ಸಂಯೋಜಕರಾದ ನಂದೀಶ್ ಹೆಚ್. ಬಿ. ಸಂತಸ ವ್ಯಕ್ತಪಡಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.