ಕರಾವಳಿಯಲ್ಲಿ ಬೇಸಿಗೆಯಲ್ಲಿ ಬಿಯರ್ ಗೆ ಹೆಚ್ಚು ಡಿಮ್ಯಾಂಡ್ ಇದ್ದು ಬೀಯರ್ ಪೂರೈಕೆಯಲ್ಲಿ ಇಳಿಕೆ…!!

ಉಡುಪಿ: ಉಡುಪಿ, ದ.ಕನ್ನಡದಲ್ಲಿ ಬೇಸಿಗೆಯ ಕಾಲದಲ್ಲಿ ಬಿಯರ್ ಗೆ ಹೆಚ್ಚು ಡಿಮ್ಯಾಂಡ್ ಇದ್ದು, ಬೇಡಿಕೆಗೆ ಸ್ಪಂದಿಸಿ ಸೂಕ್ತ ರೀತಿಯ ಸರಬರಾಜು ಕಂಪೆನಿಯವರು ಮಾಡುತ್ತಿಲ್ಲ.ಇಲಾಖೆ, ಕೆಎಸ್‌ಬಿಸಿಎಲ್‌ ಹಾಗೂ ಡಿಪೋದವರ ಹತ್ತಿರ ವಿನಂತಿಸಿದ್ದೇವೆ. ಎಲ್ಲೂ ಕೂಡ ಸರಬರಾಜು ಆಗುತ್ತಿಲ್ಲ”ಎಂದು ಕರ್ನಾಟಕ ರಾಜ್ಯ ಮಧ್ಯ ಮಾರಾಟಗಾರರ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಗೋವಿಂದ ರಾಜ್ ಹೇಳಿದ್ದಾರೆ.

ಕರಾವಳಿಯಲ್ಲಿ ಸೆಕೆಯಿಂದಾಗಿ ಬಿಯರ್ ಬೇಡಿಕೆ ಜಾಸ್ತಿಯಾಗಿದೆ.ಮಳೆಗಾಲದಲ್ಲಿ ದಿನಕ್ಕೆ 10 ಬಾಕ್ಸ್ ಖಾಲಿಯಾದರೆ,ಈಗ 30 ಬಾಕ್ಸ್ ಬಿಯರ್ ಖಾಲಿಯಾಗುತ್ತದೆ. ಆ ಬೇಡಿಕೆಗೆ ಸರಿಯಾಗಿ ಸರಬರಾಜಾಗುತ್ತಿಲ್ಲ. ಜಾಸ್ತಿ ಮಾರಾಟವಾಗುವ ಬಿಯರ್ ಗಳು ಸಿಗುವುದೇ ಇಲ್ಲ. ಸರಬರಾಜಾಕ್ಕೆ ವಾರಕ್ಕೆ ಒಂದು ಬಾರಿ ಬರುತ್ತದೆ ಎಂದು ಹೇಳಿದ್ದಾರೆ

“ಒಂದು ತಿಂಗಳಿನಿಂದ ಈ ಸಮಸ್ಯೆ ಇದ್ದು, ಈ ಸಮಸ್ಯೆ ಮುಂದುವರೆದರೆ, ಸರಕಾರಕ್ಕೆ ಬಾರ್ ಗಳಲ್ಲಿ ಶೇಂದಿ ಮಾರಲು ಅನುಮತಿಯನ್ನು ಕೇಳುವ ಸಂದರ್ಭ ಉದ್ಭವಿಸುತ್ತದೆ,ಮೂರ್ತೆದಾರರ ಸಂಘದವರ ಹತ್ತಿರ ನಮಗೂ ಸರಬರಾಜು ಮಾಡಿ ಎಂದು ಕೇಳುವಂತಹ ಪ್ರಮೇಯ ಉದ್ಭವಿಸುತ್ತದೆ. ಇದನ್ನ ಸರಕಾರ ನಿರ್ಮಾಣ ಮಾಡಿಕೊಳ್ಳಬಾರದು. ನಮಗೆ ಸರಿಯಾಗಿ ಬಿಯರ್ ಸರಬರಾಜು ಆಗುವಂತೆ ತಯಾರಕರು ಮತ್ತು ಇಲಾಖೆಯವರು ಪ್ರಯತ್ನಿಸಬೇಕು” ಎಂದು ವಿನಂತಿಸಿದ್ದಾರೆ.

“ಗ್ರಾಹಕರಿಗೆ ಬಿಯರ್ ಸಿಗದೇ ಬಾರ್ ಸಿಬ್ಬಂದಿಗಳ ಮೇಲೆ ಅಸಮಾಧಾನ ತೋಡಿಕೊಳ್ಳುತ್ತಿದ್ದು, ಸುಮಾರು ಸರ್ಕಾರಕ್ಕೆ 30 ಸಾವಿರ ಕೋ.ಗಿಂತ ಹೆಚ್ಚು ಆದಾಯ ಕೊಡುವ ನಮ್ಮ ಸಮಸ್ಯೆ ಪರಿಹಾರ ಒದಗಿಸಿ” ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.