ಮಂಗಳೂರು: ವೈದ್ಯಕೀಯ ವಿಜ್ಞಾನ ಅಕಾಡೆಮಿಯೊಂದರ ಮೆಂಬರ್ಶಿಪ್ ಮಾಡಿಸಿಕೊಡುವುದಾಗಿ ನಂಬಿಸಿ 5 ಲ.ರೂ. ಪಡೆದು ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು “ಪೋಸ್ಟ್ ಗ್ರಾಜುವೇಟ್ ಅಕಾಡೆಮಿ ಆಫ್ ಮೆಡಿಕಲ್ ಸಯನ್ಸ್’ನಿಂದ ಮಾತನಾಡುತ್ತಿದ್ದು ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ನಲ್ಲಿ ಮೆಂಬರ್ಶಿಪ್ ಮಾಡಿಕೊಡುವುದಾಯೂ ಅದಕ್ಕೆ ಮೊದಲ ಹಂತದಲ್ಲಿ 1.50 ಲ.ರೂ ಪಾವತಿಸುವಂತೆಯೂ ತಿಳಿಸಿದ್ದ. ಅದರಂತೆ ದೂರುದಾರ ವ್ಯಕ್ತಿ 1.50 ಲ.ರೂ. ವರ್ಗಾಯಿಸಿದ್ದರು. ಬಳಿಕ ಅಪರಿಚಿತ ವ್ಯಕ್ತಿ ಮತ್ತೆ ಹಂತ ಹಂತವಾಗಿ ಒಟ್ಟು 5 ಲ.ರೂ. ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ.