ಉಡುಪಿ: ರೈಲಿಗೆ ತಲೆ ಕೊಟ್ಟು ಕಾರು ಚಾಲಕ ಆತ್ಮಹತ್ಯೆ

ಉಡುಪಿ: ಕಾರು ಚಾಲಕರೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಇದ್ರಾಳಿಯ ರೈಲ್ವೇ ನಿಲ್ದಾಣದ ಸಮೀಪ ಬುಧವಾರ ಸಂಭವಿಸಿದೆ.
ಉಡ್ಕಾ ಕಾಲನಿ ನಿವಾಸಿ ದಿನೇಶ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಮಣಿಪಾಲ ಮತ್ತು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ತಮ್ಮ ಕಾರಿನ ಚಾಲಕರಾಗಿ‌ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.