ಮಳೆಗಾಲ ಬಂತೆಂದರೆ ಎಲ್ಲರಿಗೂ ಸಂಭ್ರಮ. ಎಲ್ಲೆಡೆ ಕಂಗೊಳಿಸುವ ಹಸಿರು, ಶೀತ ಹವಾಮಾನವಿರುವ ಖುಷಿ. ಆದರೆ ಮಳೆಗಾಲದಲ್ಲಿ ನಮ್ಮ ಆರೋಗ್ಯದ ಕುರಿತು ಕೆಲವೊಂದು ಕಾಳಜಿ ವಹಿಸದಿದ್ದರೆ ಆ ಖುಷಿಯೇ ಮಾಯವಾಗಬಹುದು.
ಅಂದ ಹಾಗೆ ಆಯುರ್ವೇದದಲ್ಲಿ ವರ್ಷ ಋತುವಿನಲ್ಲಿ ಪಾಲಿಸಬೇಕಾದ ಹಲವು ನಿಯಮಗಳ ಉಲ್ಲೇಖವಿದೆ. ನೀವಿದ್ದನ್ನು ಪಾಲಿಸಿದರೆ ಈ ಮಳೆಗಾಲವನ್ನು ಖುಷಿಯಿಂದ ಎಂಜಾಯ್ ಮಾಡಬಹುದು.
ಮಳೆಗಾಲದಲ್ಲಿ ಏನ್ ಸಮಸ್ಯೆ ಕಾಡುತ್ತೆ?
ಈ ಋತುವಿನಲ್ಲಿ ವಾತಾ ಪ್ರಕೋಪ ದೇಹ ಬಲ ಹಾಗೂ ಜೀರ್ಣಶಕ್ತಿ ಕ್ಷೀಣಿಸುತ್ತದೆ.
ಕೆಮ್ಮು, ಶೀತ, ಜ್ವರ, ಮಲೇರಿಯಾ, ಆರ್ಥ್ರೈಟಿಸ್, ಗಂಟು ನೋವು ,ಅಜೀರ್ಣದ ಸಮಸ್ಯೆ ಗಳೆಲ್ಲಾ ಈ ಋತುವಿನಲ್ಲಿ ಕಾಮನ್.
ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ:
- ಈ ಕಾಲದಲ್ಲಿ ಜಠರಾಗ್ನಿ ಕ್ಷೀಣವಾಗಿರುವುದರಿಂದ ಸುಲಭವಾಗಿ ಜೀರ್ಣವಾಗುವ ಲಘು, ಶುದ್ಧ ಹಾಗೂ ಬಿಸಿ ಆಹಾರ ಸೇವಿಸಿ.
- ಅಕ್ಕಿ, ಬಾರ್ಲಿ, ಗೋಧಿಯಿಂದ ತಯಾರಿಸಿದ ಆಹಾರ, ಸೂಪ್, ತರಕಾರಿ, ಮಜ್ಜಿಗೆ, ಬೇಳೆಗಳು ,ಹೆಸರು ಕಾಳು ,ತುಪ್ಪ ಸೇವಿಸಿರಿ.
- ಬಿಸಿ ಮಾಡಿ ಆರಿಸಿದ ನೀರನ್ನು ಕುಡಿಯಿರಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿದರೆ ಉತ್ತಮ.
- ವಾರಕ್ಕೊಮ್ಮೆ ಉಪವಾಸ ಮಾಡುವುದರಿಂದ ಜೀರ್ಣಶಕ್ತಿ ಪ್ರಬಲಗೊಳ್ಳುತ್ತದೆ.
ಇದನ್ನು ಮಾಡಬೇಡಿ:
ಹಳಸಿದ ಆಹಾರ, ಹಸಿ ಆಹಾರ, ಸಲಾಡ್, ಬೇಯಿಸದ ಆಹಾರ, ಅತಿಯಾಗಿ ನೀರು ಕುಡಿಯುವುದು, ಹಸಿರು ಸೊಪ್ಪುಗಳನ್ನು ಸೇವಿಸುವುದು, ಮೊಸರು, ಸಿಹಿತಿಂಡಿ ಸೇವಿಸಕೂಡದು. ಹಗಲಲ್ಲಿ ನಿದ್ದೆಮಾಡಬಾರದು.
ಇಷ್ಟು ಮಾಡಿ ಸಾಕು:
- ಶುದ್ಧ ಹಾಗು ಶುಷ್ಕ ಬಟ್ಟೆಗಳನ್ನು ಧರಿಸಿರಿ.
- ಮಲೇರಿಯಾವನ್ನು ತಡೆಗಟ್ಟಲು ಮನೆಯ ಸುತ್ತಮುತ್ತಲಿನಲ್ಲಿ ನೀರು ಶೇಖರವಾಗದಂತೆ ನೋಡಿಕೊಳ್ಳಿ.
- ಡಯಾಬಿಟಿಸ್ ಇರುವವರು ತಮ್ಮ ಕಾಲನ್ನು ಸದಾ ಶುಚಿಗೊಳಿಸಬೇಕು.
- ಮುಲ್ತಾನಿ ಮಿಟ್ಟಿ ದೇಹಕ್ಕೆ ಲೇಪಿಸಿ ಒಣಗಿದ ನಂತರ ಸ್ನಾನ ಮಾಡಿದರೆ ಒಳಿತು.
- ಬೇವಿನ ಎಲೆಯ ಧೂಪವನ್ನುಹಚ್ಚಿರಿ.
- ಬಿಸಿ ನೀರಿನ ಸ್ನಾನ ಉತ್ತಮ ನೀರಿಗೆ ಸ್ವಲ್ಪ ಬೇವಿನ ಎಣ್ಣೆ ಹಾಕಿದರೆ ಸ್ಕಿನ್ ಇನ್ಫೆಕ್ಷನ್ ಯಿಂದ ರಕ್ಷಣೆ ಪಡೆಯಬಹುದು . ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿರಿ.
ಇಲ್ಲಿ ಹೇಳಿದ ನಿಯಮಗಳನ್ನು ಪಾಲಿಸಿದರೆ ಮಳೆಗಾಲದಲ್ಲಿ ಆರೋಗ್ಯದ ಸಮಸ್ಯೆ ನಿಮಗೆ ಖಂಡಿತ ಕಾಡುವುದಿಲ್ಲ.