ಆದಾಯ ತೆರಿಗೆ ಹಳೆಯ ಪದ್ಧತಿ: ಐಟಿಆರ್ ಸಲ್ಲಿಸುವ ಮೊದಲು ಈ ಕಡಿತವನ್ನು ತಿಳಿದುಕೊಳ್ಳಿ

ಆದಾಯ ತೆರಿಗೆ: ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸುವಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈಯಕ್ತಿಕ ಆದಾಯ ತೆರಿಗೆಯ ಹೊಸ ಪದ್ದತಿಯಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದ್ದರು. ಸರ್ಕಾರ ಜಾರಿಗೆ ತಂದಿರುವ ಹೊಸ ತೆರಿಗೆ ಪದ್ಧತಿಯು 2023-24ನೇ ಹಣಕಾಸು ವರ್ಷದಿಂದ ಡೀಫಾಲ್ಟ್ (ಪೂರ್ವ ನಿಯೋಜಿತ) ಆಗಿರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.

ತಮ್ಮ ತೆರಿಗೆ ಪ್ರಯೋಜನಗಳನ್ನು ಉಳಿಸಿಕೊಳ್ಳಲು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಲು ಬಯಸುವ ತೆರಿಗೆದಾರರು ಅದರ ಬಗ್ಗೆ ಘೋಷಣೆಯನ್ನು ಮಾಡಬೇಕು. ಆದರೆ ನೀವು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ನಡುವೆ ಆಯ್ಕೆ ಮಾಡಲು ವಿಫಲವಾದರೆ, ಅದು ನಿಮ್ಮ ತೆರಿಗೆಯನ್ನು ಆದಾಯದ ಮೇಲೆ ಮೂಲ (ಟಿಡಿಎಸ್)ದಲ್ಲಿ ಕಡಿತಗೊಳಿಸುವುದರ ಮೇಲೆ ಪರಿಣಾಮ ಬೀರುತ್ತದೆ.

ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಭಾರತದ ನಿವಾಸಿ ವ್ಯಕ್ತಿಗೆ ರಿಯಾಯಿತಿಯನ್ನು 7 ಲಕ್ಷಕ್ಕೆ ಏರಿಸಲಾಗಿದೆ. ರಿಯಾಯಿತಿಯನ್ನು ಹೆಚ್ಚಿಸಿದ ನಂತರ 7 ಲಕ್ಷದವರೆಗಿನ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರು ತೆರಿಗೆಯಲ್ಲಿ 33,800 ರೂಪಾಯಿಗಳನ್ನು ಉಳಿಸುತ್ತಾರೆ. ಹೊಸ ತೆರಿಗೆ ಪದ್ಧತಿಯು ಕೆಲವು ಪ್ರಯೋಜನಗಳನ್ನು ನೀಡಬಹುದಾದರೂ, ಹಳೆಯ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ಅನೇಕ ತೆರಿಗೆ ರಿಯಾಯತಿ ಮತ್ತು ವಿನಾಯಿತಿಗಳನ್ನು ಬಿಡಬೇಕಾಗುತ್ತದೆ.

ಹಳೆಯ ತೆರಿಗೆ ಪದ್ಧತಿಯಲ್ಲಿ ಲಭ್ಯವಿರುವ ವಿನಾಯತಿಗಳು

1. ಪ್ರಮಾಣಿತ ಕಡಿತ: ಸಂಬಳ ಪಡೆಯುವ ವ್ಯಕ್ತಿಗಳಿಗೆ ರೂ 50,000 (ಹೊಸ ತೆರಿಗೆ ಪದ್ಧತಿಯಲ್ಲಿಯೂ ಲಭ್ಯವಿದೆ) ವಿನಾಯತಿ.
2. ವಿಭಾಗ 80 CCD (1B): ಎನ್.ಪಿ.ಎಸ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ರೂ.50,000 ವರೆಗೆ ಹೆಚ್ಚುವರಿ ವಿನಾಯತಿ.
3. ವಿಭಾಗ 80TTA: ಈ ವಿಭಾಗವು ಒಬ್ಬ ವ್ಯಕ್ತಿಗೆ ಅಥವಾ ಹಿಂದೂ ಅವಿಭಜಿತ ಕುಟುಂಬಕ್ಕೆ ಬ್ಯಾಂಕ್, ಸಹಕಾರ ಸಂಘ ಅಥವಾ ಅಂಚೆ ಕಛೇರಿಯಲ್ಲಿನ ಉಳಿತಾಯ ಖಾತೆಯಿಂದ ಬಡ್ಡಿ ಆದಾಯದ ವಿರುದ್ಧ ಗರಿಷ್ಠ ರೂ.10,000 ವಿನಾಯತಿಯನ್ನು ಒದಗಿಸುತ್ತದೆ.
4. ವಿಭಾಗ 80D: ಇದು ಆರೋಗ್ಯ ವಿಮೆಗಳ ಕಂತುಗಳಿಗೆ ವಿನಾಯತಿಯನ್ನು ಅನುಮತಿಸುತ್ತದೆ.
5. ವಿಭಾಗ 80G: ಇದರಲ್ಲಿ ಅರ್ಹ ಟ್ರಸ್ಟ್‌ ಮತ್ತು ದತ್ತಿಗಳಿಗೆ ದೇಣಿಗೆಗಳು ವಿನಾಯತಿಗಳಿಗೆ ಅರ್ಹತೆ ಪಡೆಯುತ್ತವೆ.
6. ವಿಭಾಗ 80C: ನೀವು EPF ಮತ್ತು PPF, ELSS, ಜೀವ ವಿಮಾ ಪ್ರೀಮಿಯಂಗಳು, ಗೃಹ ಸಾಲ ಪಾವತಿ, SSY, NSC ಮತ್ತು SCSS ನಲ್ಲಿ ಮಾಡುವ ಹೂಡಿಕೆಗಳಿಗೆ ವಿನಾಯತಿ.

ನೀವು ಉದ್ಯೋಗಿಯಾಗಿದ್ದರೆ ಮತ್ತು ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯ ನಡುವೆ ಆಯ್ಕೆ ಮಾಡಲು ವಿಫಲವಾದರೆ, ನೀವು ಹೊಸ ಪದ್ದತಿಯಲ್ಲಿ ಟಿಡಿಎಸ್ ಕಡಿತವನ್ನು ಹೊಂದಿರುತ್ತೀರಿ ಎಂಬುದನ್ನು ತೆರಿಗೆದಾರರು ಗಮನಿಸಬೇಕು.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಸುತ್ತೋಲೆ ಈ ವಿಷಯವನ್ನು ಸ್ಪಷ್ಟಪಡಿಸಿದೆ. “ಒಂದು ವೇಳೆ ಉದ್ಯೋಗಿಯು ಸೂಚನೆಯನ್ನು (ಹಳೆ ಪದ್ದತಿಯಲ್ಲಿ ಮುಂದುವರಿಯುವ) ನೀಡದಿದ್ದರೆ, ಉದ್ಯೋಗಿಯು ಡೀಫಾಲ್ಟ್ ತೆರಿಗೆ ಪದ್ಧತಿಯಲ್ಲಿ ಮುಂದುವರಿಯುತ್ತಾನೆ ಮತ್ತು ಹೊಸ ತೆರಿಗೆ ಪದ್ಧತಿಯಿಂದ ಹೊರಗುಳಿಯುವ ಆಯ್ಕೆಯನ್ನು ಚಲಾಯಿಸಿಲ್ಲ ಎಂದು ಭಾವಿಸಲಾಗುತ್ತದೆ. ಅಂತೆಯೇ, ಅಂತಹ ಸಂದರ್ಭದಲ್ಲಿ, ಉದ್ಯೋಗದಾತನು ಕಾಯಿದೆಯ ಸೆಕ್ಷನ್ 115BAC ಯ ಉಪ-ವಿಭಾಗ (lA) ಅಡಿಯಲ್ಲಿ ಒದಗಿಸಲಾದ ದರಗಳಿಗೆ ಅನುಗುಣವಾಗಿ ಕಾಯಿದೆಯ ಸೆಕ್ಷನ್ 192 ರ ಅಡಿಯಲ್ಲಿ ಆದಾಯದ ಮೇಲೆ ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಬೇಕು, ”ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಮಾಹಿತಿ: ನ್ಯೂಸ್18.ಕಾಮ್