ಉಡುಪಿ: ಶಾಸಕ ಕೆ ರಘುಪತಿ ಭಟ್ ಮಂಗಳವಾರ ಬಜೆ ಡ್ಯಾಂ ಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಮಳೆ ಬಂದಿರುವುದರಿಂದ ಬಜೆ ಡ್ಯಾಂ ನ ಒಳಹರಿವು ಹೆಚ್ಚಾಗಿದ್ದು 2.70ರಷ್ಟಾಗಿದೆ. ಆದ್ದರಿಂದ ನಾಳೆ ಸಂಜೆಯ ನಂತರ ನಗರಸಭಾ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆಯೂ ನೀರು ಕೊಡುವ ವ್ಯವಸ್ಥೆಯನ್ನು ಮತ್ತೆ ಮುಂದುವರೆಸಲಾಗುತ್ತದೆ. ನೀರು ಯಥಾವತ್ತಾಗಿ ಬರುತ್ತಿರುವುದರಿಂದ ನಾಳೆ ಸಂಜೆಯ ವೇಳೆ ನೀರು ಬಿಡುವ ಬಗ್ಗೆ ತಿಳಿಸಿದರು.
ಕಳೆದ ಒಂದು ತಿಂಗಳಿನಿಂದ ಉಡುಪಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಈ ಬಗ್ಗೆ ತಾಳ್ಮೆ ವಹಿಸಿ ನಮ್ಮೊಂದಿಗೆ ಸಹಕರಿಸಿದ ನಾಗರೀಕರಿಗೆ ಹಾಗೂ ನಿರಂತರವಾಗಿ ನೀರಿನ ಸಮಸ್ಯೆಯನ್ನು ಪರಿಹರಿಸಲು ತಮ್ಮ ಜೊತೆ ಕೈಜೋಡಿಸಿ ಶ್ರಮದಾನ ಸಹಿತ ಇನ್ನಿತರ ಕಾರ್ಯಗಳಲ್ಲಿ ತೊಡಗಿಸಿಕೊಂಡ ಎಲ್ಲಾ ಕಾರ್ಯಕರ್ತರು ಹಾಗೂ ನಾಗರೀಕರಿಗೆ ಅಭಿನಂ ೇ ಿ ವೇಳೆ ಶಾಸಕರ ಜೊತೆಗೆ ಉಡುಪಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ನಗರಸಭಾ ಸದಸ್ಯ ಗಿರೀಶ್ ಅಂಚನ್, ಮಂಜುನಾಥ್ ಮಣಿಪಾಲ್, ಪಕ್ಷದ ಪ್ರಮುಖರಾದ ರವಿ ಅಮೀನ್ ಉಪಸ್ಥಿತರಿದ್ದರು.*