ಪ್ರಾಣಕ್ಕೆ ಮುಳುವಾಯ್ತು ಏರಿಯಲ್ ಆಕ್ರೋಬ್ಯಾಟ್ ಟ್ರಾಪೀಜ್: ಪ್ರದರ್ಶನ ವೇಳೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡು ಮಹಿಳೆ

ಬೀಜಿಂಗ್: ಚೈನೀಸ್ ಆಕ್ರೋಬ್ಯಾಟ್ ಟ್ರಾಪೀಜ್ ಪ್ರದರ್ಶನದ ಸಮಯದಲ್ಲಿ ಚೀನಾದ ಮಹಿಳಾ ಜಿಮ್ನಾಸ್ಟ್ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸನ್ ಎಂಬ ಉಪನಾಮದ ಮಹಿಳೆ, ಚೀನಾದ ಸೆಂಟ್ರಲ್ ಅನ್ಹುಯಿ ಪ್ರಾಂತ್ಯದ ಸುಝೌ ನಗರದಲ್ಲಿ ಫ್ಲೈಯಿಂಗ್-ಟ್ರಾಪೀಸ್ ಆಕ್ಟ್ ಸಮಯದಲ್ಲಿ ಕೆಳಗೆ ಬಿದ್ದಿದ್ದಾಳೆ ಎಂದು ಬಿಬಿಸಿ ವರದಿ ಮಾಡಿದೆ.

ಕಾರ್ಯಕ್ರಮದ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಮ್ನಾಸ್ಟ್ ಹಾಗೂ ಪತಿಯೂ ಆಗಿರುವ ಜಾಂಗ್ ಜೊತೆ ಏರಿಯಲ್ ಆಕ್ರೋಬ್ಯಾಟ್ ಮಾಡುತ್ತಿದ್ದ ವೇಳೆ ಕೈಜಾರಿ ಕೆಳಗೆ ಬಿದ್ದಿದ್ದಾರೆ ಸುರಕ್ಷತಾ ಬೆಲ್ಟ್ ಧರಿಸದಿರುವುದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

30 ಅಡಿ ಎತ್ತರದಿಂದ ಬಿದ್ದ ಮಹಿಳೆಯನ್ನು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ದಾರಿ ಮಧ್ಯೆ ಕೊನೆಯುಸಿರೆಳೆದ್ದಿದ್ದಾರೆ. ಮೃತ ಮಹಿಳೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ದಿ ಪೇಪರ್ ನ್ಯೂಸ್​​​​ ವೆಬ್‌ಸೈಟ್ ವರದಿ ಮಾಡಿದೆ.

ಸನ್ ಮತ್ತು ಆಕೆಯ ಪತಿ ಜಾಂಗ್ ಅವರು ಹಲವು ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು “ಚೆನ್ನಾಗಿ ಕಾಣುವ ಸಲುವಾಗಿ” ಸುರಕ್ಷತಾ ಬೆಲ್ಟ್‌ಗಳಿಲ್ಲದೆ ಪ್ರದರ್ಶನ ನೀಡುತ್ತಿದ್ದರು ಎಂದು ಚೀನಾದ ಮಾಧ್ಯಮ ಔಟ್ಲೆಟ್ ದಿ ಪೇಪರ್ ಅನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ವೇದಿಕೆಯಲ್ಲಿ ಸುರಕ್ಷತಾ ಜಾಲದ ಕೊರತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಸಾಹಸ ಕಲಾವಿದರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಆಕ್ರೋಬ್ಯಾಟಿಕ್ ಉದ್ಯಮದಲ್ಲಿ ಬಿಗಿಯಾದ ನಿಯಂತ್ರಣ ಕಾನೂನಿಗಾಗಿ ಜನರು ಒತ್ತಾಯಿಸಿದ್ದಾರೆ.