ಕುಂದಾಪುರ: ಸಹನಾ ಅಕ್ವಾಟಿಕ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಂಕದಕಟ್ಟೆ,ಕೋಟೇಶ್ವರ ಮತ್ತು
ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಅಖಿಲ ಭಾರತ ಚೆಸ್ ಫೆಡರೇಶನ್ ಮತ್ತು ಅಂತರಾಷ್ಟ್ರೀಯ ಚೆಸ್ ಫೆಡರೇಶನ್ ನ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ (ಬಿಲೋ 2000)ಅಮೆಚೂರ್ ಫಿಡೆ ರೇಟೆಡ್ ಚೆಸ್ ಚಾಂಪಿಯನ್ ಶಿಪ್-2023 ಏಪ್ರಿಲ್ 21 ಶುಕ್ರವಾರದಂದು ಕೋಟೇಶ್ವರದ ಸಹನಾ ಆರ್ಕಿಡ್ ಹೋಟೆಲ್ ನಲ್ಲಿ ಆರಂಭಗೊಂಡಿತು.
ಸರಳವಾಗಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಮೈಸೂರಿನ ಪ್ರಸಿದ್ಧಿ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು.
ಸಹನಾ ಗ್ರೂಪಿನ ಅಧ್ಯಕ್ಷೆ ಸಹನಾ ಎಸ್ ಶೆಟ್ಟಿ, ಕಶ್ವಿ ಚೆಸ್ ಸ್ಕೂಲ್ ನ ಅಧ್ಯಕ್ಷ ನರೇಶ್ ಬಿ, ಕಾರ್ಯದರ್ಶಿ ಪುರುಷೋತ್ತಮ ಕಾಮತ್, ಮುಖ್ಯ ತೀರ್ಪುಗಾರ ಅನಿಲ್ ಎನ್ ಜೆ ಉಪಸ್ಥಿತರಿದ್ದರು.
ಎಪ್ರಿಲ್ 23 ರ ತನಕ ನಡೆಯುವ ಚಾಂಪಿಯನ್ ಶಿಪ್ ನಲ್ಲಿ ಅಗ್ರಸ್ಥಾನದಲ್ಲಿರುವ 4 ಆಟಗಾರರನ್ನು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ.
ಈ ಪಂದ್ಯಾವಳಿಯಲ್ಲಿ ರಾಜ್ಯದ ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಉಡುಪಿ,ದಕ್ಷಿಣ ಕನ್ನಡ,ಧಾರವಾಡ, ಕಲ್ಬುರ್ಗಿ, ಮೈಸೂರು, ಬೆಂಗಳೂರು ಹಾಗೂ ಹಲವು ಜಿಲ್ಲೆಗಳ ಒಟ್ಟು 213 ಚೆಸ್ ಆಟಗಾರರು ಪಾಲ್ಗೊಂಡಿದ್ದಾರೆ. ಅಲ್ಲದೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಆಟಗಾರರಾದ ಅಜಿತ್ ಎಮ್.ಪಿ, ಬಾಲಕಿಶನ್ ಎ ಹಾಗೂ ಮೂಕ ಹಾಗೂ ಕಿವುಡ ಚೆಸ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಅಂಬಿಕಾ ಮಸಗಿ ಭಾಗವಹಿಸಲಿದ್ದಾರೆ.
ತೀರ್ಪುಗಾರರಾಗಿ ಆದಿತ್ಯ ಕೃಷ್ಣಮೂರ್ತಿ, ಬಸವರಾಜ, ಬಾಬು ಜೆ ಪೂಜಾರಿ, ಸೌಂದರ್ಯ ಯು ಕೆ, ಸುರೇಶ ಸಹಕರಿಸುತ್ತಿದ್ದಾರೆ.
ಈ ಚಾಂಪಿಯನ್ ಶಿಪ್ ನಲ್ಲಿ ಒಟ್ಟು 3,40,00 ನಗದು ಬಹುಮಾನ ಹಾಗೂ ವಿವಿಧ ವಯೋಮಾನದ (U-8,U-10,U-12,&U-15) ನಗದು ಬಹುಮಾನ ಮತ್ತು ಆಕರ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಭಾನುವಾರ ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಪ್ರಸಿದ್ದ ಸಂಗೀತ ನಿರ್ದೇಶಕ ಮತ್ತು ಚಿತ್ರ ನಿರ್ದೇಶಕ ರವಿ ಬಸ್ರೂರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.