ಉಡುಪಿ: ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರ ಷಷ್ಠಿಪೂರ್ತಿ ಸಂದರ್ಭದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದಿಂದ ಆಯೋಜಿಸಿದ ವಿಶ್ವಾರ್ಪಣಂ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗ ಸಂಸ್ಥೆಯ ವತಿಯಿಂದ ಶ್ರೀಗಳನ್ನು ಅಭಿನಂದಿಸಲಾಯಿತು.
15 ವರ್ಷದ ಹಿಂದೆ ವಿದ್ಯಾಪೋಷಕ್ ಸಂಸ್ಥೆಯನ್ನು ಜ್ಯೋತಿಬೆಳಗಿಸಿ ಉದ್ಘಾಟಿಸಿ, ನಿರಂತರವಾಗಿ ಸಂಸ್ಥೆಯನ್ನು ಪೋತ್ಸಾಹಿಸುತ್ತಾ ಬಂದ ಶ್ರೀಗಳನ್ನು ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಫಲವಸ್ತು ಅರ್ಪಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪರ್ಯಾಯ ಮಠಾಧೀಶರಾದವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿಗಳಾದ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. . ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ ಭಟ್, ಪ್ರೊ. ಎಂ.ಎಲ್ ಸಾಮಗ, ಕಾರ್ಯದರ್ಶಿ ಮುರಲಿ ಕಡೆಕಾರ್, ಎಚ್.ಎನ್ ಶೃಂಗೇಶ್ವರ, ಸುಬ್ರಹ್ಮಣ್ಯ ಬಾಸ್ರಿ, ಎಚ್.ಎನ್ ವೆಂಕಟೇಶ್, ದಿನೇಶ್ ಪೂಜಾರಿ, ಕೃಷ್ಣಮೂರ್ತಿ ಭಟ್, ಪ್ರಸಾದ್ ರಾವ್, ಮಂಜುನಾಥ, ರಾಜೀವಿ ಉಪಸ್ಥಿತರಿದ್ದರು.