ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ -2 ಪ್ರೇಕ್ಷಕರು ನಿರೀಕ್ಷಿಸುತ್ತಿರುವ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಏಪ್ರಿಲ್ 28 ರಂದು ಬಿಡುಗಡೆಯಾಗಲಿದೆ. ನಟಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ನಟಿಸಿರುವ ಚೋಳ ಸಾಮ್ರಜ್ಯದ ಕಥೆಯಿರುವ ಈ ಚಿತ್ರದ ಮೊದಲನೇ ಭಾಗವು ಯಶಸ್ಸನ್ನು ಕಂಡಿತ್ತು. ನಂದಿನಿ ಮತ್ತು ಊಮೈ ರಾಣಿ ಎಂಬ ಪಾತ್ರಗಳಲ್ಲಿ ಐಶ್ವರ್ಯಾ ರೈ ನಟಿಸಿದ್ದು, ಚಿಯಾನ್ ವಿಕ್ರಂ, ತ್ರಿಶಾಪ್ರಕಾಶ ರಾಜ್, ಕಾರ್ತಿ, ಜಯಮ್ ರವಿ, ಶೋಭಿತಾ, ಐಶ್ವರ್ಯ ಲಕ್ಷ್ಮಿ ಮುಂತಾದವರ ತಾರಾಗಣವಿದೆ.
ಇತ್ತೀಚಿನ ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಪೊನ್ನಿಯಿನ್ ಸೆಲ್ವನ್ ಅಮೇರಿಕಾದ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭದತ್ತ ಸಾಗುತ್ತಿದೆ. ಯು.ಎಸ್.ಎ ಪ್ರೀಮಿಯರ್‌ಗಳ ಮುಂಗಡ ಮಾರಾಟದಿಂದ ಚಲನಚಿತ್ರವು ಈಗಾಗಲೇ 200 ಸಾವಿರ ಡಾಲರ್ ಗಳನ್ನು ಸಂಗ್ರಹಿಸಿದೆ. ಮುಂದಿನ ದಿನಗಳಲ್ಲಿ ಚಿತ್ರವು ಮತ್ತಷ್ಟು ಮುನ್ನಡೆಯನ್ನು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.
ಚಿತ್ರವು ಸಾಗರೋತ್ತರ ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್‌ಬಸ್ಟರ್ ಆರಂಭವನ್ನು ಪಡೆಯಬಹುದು ಎನ್ನಲಾಗಿದೆ. ಮೊದಲ ಭಾಗವು ಕೂಡಾ ಅನೇಕ ಪ್ರದೇಶಗಳಲ್ಲಿ ಬ್ಲಾಕ್‌ಬಸ್ಟರ್ ಆಗಿತ್ತು.












