ಕರ್ನಾಟಕ ಬ್ಯಾಂಕ್ ಸೆಂಟಿನರಿ ಮಹೋತ್ಸವ: ಏ.17 ರಿಂದ ಜು.17ರ ವರೆಗೆ ವಿಶೇಷ ಗೃಹ ಸಾಲ ಅಭಿಯಾನ

ಮಂಗಳೂರು: ಖಾಸಗಿ ಬ್ಯಾಂಕ್ ಗಳಲ್ಲೆ ಅಗ್ರಗಣ್ಯ ಸ್ಥಾನದಲ್ಲಿರುವ ಕರ್ಣಾಟಕ ಬ್ಯಾಂಕ್‌ ತನ್ನ ಶತಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಗ್ರಾಹಕರಿಗಾಗಿ ಏ.17 ರಿಂದ ಜು.17ರ ವರೆಗೆ ವಿಶೇಷ ಅಭಿಯಾನ-‘ಕೆಬಿಎಲ್‌ ಸೆಂಟಿನರಿ ಮಹೋತ್ಸವ’ದ ಅಂಗವಾಗಿ ಗೃಹ ಸಾಲವನ್ನು ನೀಡಲಿದೆ. ದೇಶದಾದ್ಯಂತ ವ್ಯಾಪಿಸಿರುವ ಬ್ಯಾಂಕಿನ ಎಲ್ಲ 901 ಶಾಖೆಗಳಲ್ಲಿ ಈ ವಿಶೇಷ ಅಭಿಯಾನದ ಕೊಡುಗೆಗಳನ್ನು ಗ್ರಾಹಕರು ಪಡೆಯಬಹುದು.

ಕರ್ಣಾಟಕ ಬ್ಯಾಂಕ್‌ ಗೃಹ ಸಾಲಗಳಿಗಾಗಿ ಡಿಜಿಟಲ್‌ ಲೋನ್‌ ತಂತ್ರಾಶಗಳನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು ತಾವಿದ್ದಲ್ಲಿಂದ ಅವರ ಅನುಕೂಲಕರ ಸಮಯದಲ್ಲಿ ಈ ಸಾಲ ಸೌಲಭ್ಯಗಳನ್ನು ಡಿಜಿಟಲ್‌ ವೇದಿಕೆಗಳ ಮೂಲಕ ಪಡೆಯಬಹುದು. ಈ ಸಾಲಗಳಿಗೆ ತ್ವರಿತ ತಾತ್ವಿಕ ಮಂಜೂರಾತಿ ಲಭ್ಯವಾಗಲಿದ್ದು, ಇದು ಗ್ರಾಹಕರ ಸಂತಸ ಹೆಚ್ಚಿಸಲಿದೆ. ಈ ಅವಧಿಯಲ್ಲಿ ಗೃಹ ಸಾಲಗಳು ಶೇ.8.75ರಿಂದ ಆರಂಭವಾಗುವ ಆಕರ್ಷಕ ಬಡ್ಡಿದರಗಳಲ್ಲಿ ಲಭ್ಯವಾಗಲಿವೆ. ಈ ಅಭಿಯಾನದಲ್ಲಿ ಗೃಹಸಾಲಗಳು ಸಂಸ್ಕರಣಾ ಶುಲ್ಕ ರಹಿತವಾಗಿ ಗ್ರಾಹಕರಿಗೆ ಸಿಗಲಿದೆ. ಅಲ್ಲದೆ ಇತರ ಶುಲ್ಕಗಳಲ್ಲೂ ವಿಶೇಷ ವಿನಾಯ್ತಿ ನೀಡಲಾಗುವುದು ಹಾಗೂ ಇನ್ನೂ ಅನೇಕ ಇತರ ಸೌಲಭ್ಯಗಳನ್ನು ಒದಗಿಸಲಾಗುವುದು.

ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬ್ಯಾಂಕಿನ ಇಂಟರಿಮ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಶೇಖರ್‌ ರಾವ್‌, ಬ್ಯಾಂಕಿನ ಶತಮಾನೋತ್ಸವ ವರ್ಷದಲ್ಲಿ ಈ ಅಭಿಯಾನದ ಮುಖಾಂತರ ವಿಶೇಷ ಗೃಹಸಾಲ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲು ತುಂಬಾ ಸಂತೋಷವಾಗಿದೆ. ಅತ್ಯಂತ ಸುಲಭವಾಗಿ ಡಿಜಿಟಲ್‌ ಪ್ರಕ್ರಿಯೆಗಳ ಮೂಲಕ ಸಾಲಗಳಿಗೆ ಕ್ಷಿಪ್ರ ಮಂಜೂರಾತಿ, ಆಕರ್ಷಕ ಬಡ್ಡಿದರ ಲಭ್ಯವಿದ್ದು, ತನ್ಮೂಲಕ ಸ್ವಂತ ಮನೆ ಹೊಂದುವ ಕನಸುಗಳು ನನಸಾಗಲಿವೆ. ‘ನಿಮ್ಮ ಕುಟುಂಬದ ಬ್ಯಾಂಕ್‌ ದೇಶದಾದ್ಯಂತ’ ಎಂಬ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಬ್ಯಾಂಕ್‌ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲಿದೆ ಎಂದರು.