ಬಿಲಾಸ್ ಪುರ: ಸಿಗ್ನಲ್ ಓವರ್‌ಶೂಟ್‌ನಿಂದಾಗಿ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಬುಧವಾರ ಎರಡು ಸರಕು ರೈಲುಗಳ ನಡುವೆ ಅಪಘಾತ ನಡೆದಿದ್ದು, ರೈಲುಗಳು ಹಳಿತಪ್ಪಿ ಬಿಲಾಸ್‌ಪುರ-ಕಟ್ನಿ ರೈಲು ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿವೆ ಎಂದು ಬಿಲಾಸ್‌ಪುರ ರೈಲ್ವೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಗ್ಗೆ 6.50ರ ಸುಮಾರಿಗೆ ಸಿಂಗ್‌ಪುರ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸಿಗ್ನಲ್ ಓವರ್‌ಶೂಟ್‌ನಿಂದ ರೈಲು ಹಳಿ ತಪ್ಪಿದೆ ಎಂದು ಹೆಚ್ಚಿನ ವಿವರಗಳನ್ನು ನೀಡದೆ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಪಘಾತ ನಡೆದ ಗೂಡ್ಸ್ ರೈಲುಗಳ ಕೆಲವು ವ್ಯಾಗನ್‌ಗಳು ರೈಲ್ವೇ ಹಳಿ ಮೇಲೆ ಬಿದ್ದಿವೆ ಮತ್ತು ಸರಕು ಸಾಗಣೆ ರೈಲಿನ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಬಳಿಕ ಅದನ್ನು ನಂದಿಸಲಾಗಿದೆ.
Another Video Goods train rams into a stationary goods train from at Singhpur railway station Rajesh Prasad killed, 3 injured.#shahdol #trainaccident #MadhyaPradesh #india pic.twitter.com/6WAoU1BjVu
— Siraj Noorani (@sirajnoorani) April 19, 2023
ಇದರಿಂದ ಬಿಲಾಸ್‌ಪುರ-ಕಟ್ನಿ ರೈಲ್ವೇ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಮೂಲಗಳ ಪ್ರಕಾರ ರೈಲು ಸಂಚಾರವನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತದಲ್ಲಿ ಮೂವರಿಗೆ ಗಾಯವಾಗಿದ್ದು, ಚಾಲಕ ರೈಲಿನೊಳಗೆ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.