ಉಡುಪಿ: ಮಣಿಪಾಲದ ಮಂಚಿಕೆರೆ ಎಂಬಲ್ಲಿ 5 ವರ್ಷಗಳ ಹಿಂದೆ ಬಿರುಕುಗೊಂಡಿದ್ದ ಭೂಮಿ, ಸದ್ಯ ಮತ್ತೊಮ್ಮೆ ಬಿರುಕು ಕಾಣುತ್ತಿದ್ದು ಆ ಭಾಗದಲ್ಲಿ ಆತಂಕ ಮನೆ ಮಾಡಿದೆ.
ಐದು ವರ್ಷಗಳ ಬಿರುಕುಗೊಂಡ ಬಳಿಕ ಆ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಅಂದು ಭೂಮಿಯ ಭೂಕಂಪನ ವೇಳೆ ಸಂಭವಿಸುವ ಬಿರುಕಿನಂತಿತ್ತು.
2014 ರಲ್ಲಿ ಬಿರುಕುಗೊಂಡ ವೇಳೆ ಆ ಭಾಗಕ್ಕೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವರದಿ ತಯಾರಿಸಿ ಜಿ.ಪಂ.ಗೆ ನೀಡಿದ್ದು, ಮಲ್ಪೆಯಿಂದ ಉಪ್ಪೂರು, ಮಣಿಪಾಲ, ಪರ್ಕಳ ಪ್ರದೇಶಗಳಲ್ಲಿ ಭೂಮಿಯ ತಳಭಾಗದಲ್ಲಿ ವಾತವರಣದ ಉಷ್ಣತೆಯಿಂದಾಗಿ ಭೂಮಿಯ ತಳಭಾಗದಲ್ಲಿ ಬಿರುಕು ಕಾಣಿಸುತ್ತದೆ ಎಂಬುದಾಗಿ ವರದಿಯಲ್ಲಿತ್ತು ಎನ್ನಲಾಗಿದೆ.
ಸದ್ಯ ಮತ್ತೊಮ್ಮೆ ಬಿರುಕು ಕಾಣುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆ ಅಗತ್ಯ ಎಂದು ಸ್ಥಳೀಯರ ಅಭಿಪ್ರಾಯ ಕೇಳಿ ಬರುತ್ತಿದೆ.