ನವೀಕೃತ ಕಾಂಕ್ರೀಟ್ ರಸ್ತೆ ಡಮಾರ್..!! ಅಲ್ಲಲ್ಲಿ.. ಬಿರುಕು..!! ಸಾರ್ವಜನಿಕರ ಹಣ ವ್ಯರ್ಥ..!!

ಉಡುಪಿ: ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿಯಿಂದ ರೈಲು ನಿಲ್ದಾಣ ಸಂಪರ್ಕಿಸುವ ಜಾರ್ಜ್ ಫೆರ್ನಾಂಡಿಸ್ ರಸ್ತೆಯನ್ನು ಕೆಲವು ಸಮಯಗಳ ಹಿಂದೆ ದುರಸ್ಥಿ ಪಡಿಸಲಾಗಿತ್ತು. ಇದೀಗ ಕಳಪೆ ಮಟ್ಟದ ಕಾಮಗಾರಿಯಿಂದ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದ್ದು. ಸಾರ್ವಜನಿಕರ ಹಣ ಪೋಲಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಂಡ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದ ಜಾರ್ಜ್ ಫೆರ್ನಾಂಡಿಸ್ ರಸ್ತೆಯನ್ನು ದುರಸ್ತಿ ಪಡಿಸುವಂತೆ ವಿನೂತನ ಪ್ರತಿಭಟನೆಯ ಮೂಲಕ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಅಧಿಕಾರಿಗಳ ಗಮನ ಸೆಳೆದಿದ್ದರು. ಆ ಬಳಿಕ ರೈಲ್ವೆ ಆರೋಗ್ಯ ಕೇಂದ್ರದಿಂದ, ರೈಲು ನಿಲ್ದಾಣದವರೆಗೆ ಕಾಂಕ್ರೀಟಿಕರಣಗೊಳಿಸಲು ಮಂಜೂರಾತಿ ದೊರೆತಿತ್ತು. ಇದೀಗ ಕಾಮಗಾರಿ ನಡೆದು ಕೆಲವು ದಿನಗಳು ಕಳೆದಿದೆ.. ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ಇದೀಗ ವಾಹನಗಳು ಸಂಚರಿಸಲು ಭಯ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಕೋಟ್ಯಾಂತರ ಹಣ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆ ಕೆಲವೇ ದಿನಗಳಲ್ಲಿ ಹಾಳಾಗಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯವರು ಗುತ್ತಿಗೆದಾರರಿಂದಲೇ ಸಂಪೂರ್ಣ ರಸ್ತೆ ನಿರ್ಮಾಣದ ಹಣವನ್ನು ವಸೂಲಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿನೀಡಿ ಕಾಮಗಾರಿಯ ಪರಿಶೀಲನೆ ನಡೆಸಬೇಕು, ಸತ್ಯಾಸತ್ಯತೆ ಅರಿತು ಸೂಕ್ತ ಕ್ರಮ ಜರುಗಿಸ ಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.