ಇಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ರಥೋತ್ಸವ

ಉಚ್ಚಿಲ: ಶ್ರೀ ಕ್ಷೇತ್ರ ಉಚ್ಶಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವರ್ಷಾವಧಿ ಮಹೋತ್ಸವ ಎ. 4 ರಿಂದ 9ರವರೆಗೆ ನಡೆಯಲಿದ್ದು ಇಂದು ಶ್ರೀ ಮಹಾಲಕ್ಷ್ಮೀ ರಥಾರೋಹಣ ನಡೆಯಲಿದೆ.ಇಂದು ಬೆಳಿಗ್ಗೆ 5 ರಿಂದ ಪ್ರಾತಃಕಾಲ ಪೂಜೆ, ನವಕ ಪ್ರಧಾನ ಹೋಮ, ಸಹಸ್ರ ಪುಷ್ಪಾರ್ಚನೆ, ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ 12ಕ್ಕೆ ಮಹಾಲಕ್ಷ್ಮೀ ರಥಾರೋಹಣ, ಭಜನೆ, ಮಹಾ ಅನ್ನ ಸಂತರ್ಪಣೆ, ಸಂಜೆ 5ಕ್ಕೆ ಭದ್ರಕಾಳಿ ಅಮ್ಮನವರ ದರ್ಶನ, ರಾತ್ರಿ 8ಕ್ಕೆ ಸಾಮೂಹಿಕ ಪ್ರಾರ್ಥನೆ, ರಥಕ್ಕೆ ಅಜಕಾಯಿ ಸಮರ್ಪಣೆ, ಶ್ರೀ ಮನ್ಮಹಾರಥೋತ್ಸವ, ಸಿಡಿಮದ್ದು ಪ್ರದರ್ಶನ, ಉತ್ಸವ ಬಲಿ, 9:30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಜತ ಪಾಲಕಿ ಉತ್ಸವ ಬಲಿ, ಕವಾಟ ಬಂಧನ ನಡೆಯಲಿದೆ.

ಎ. 8 ರಂದು ಬೆಳಿಗ್ಗೆ 6:30 ರಿಂದ ಪುಣ್ಯಾಹ, ಕವಾಟೋದ್ಘಾಟನೆ, ಚುಣೋತ್ಸವ, 9:30ರಿಂದ ತುಲಾಭಾರಾದಿ ಸೇವೆಗಳು, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ರಾತ್ರಿ 7.30 ರಿಂದ ಆರಾಧನಾ ಪೂಜೆ, ಧ್ವಜಾವರೋಹಣ, ರಾತ್ರಿ ಪೂಜೆ ನಡೆಯಲಿದೆ.

ಎ.9 ರಂದು ಬೆಳಿಗ್ಗೆ 6.30ರಿಂದ ಮಹಾಸಂಪ್ರೋಕ್ಷಣಿ, ಮಹಾ ಕಲಶಾಭಿಷೇಕ, ಕಾಳಿ ಸಹಸ್ರನಾಮ ಹೋಮ, ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ರಾತ್ರಿ ಆರಾಧನಾ ಪೂಜೆ, ಭದ್ರಕಾಳಿ ಕುರುಜಿ ತರ್ಪಣ ಸೇವೆ ನಡೆಯಲಿದೆ.

ಇಂದು ಬೆಳಿಗ್ಗೆ 9ಕ್ಕೆ ಮೊಗವೀರ ಸಮಾಜದ ಕುಲಗುರು ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪ್ರತಿಮೆ ಸ್ಥಾಪನೆಗೆ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಲಿದೆ.