ಬನ್ನಂಜೆ ಬಾಲಭವನ ಆವರಣದಲ್ಲಿ ಸಂಜೀವಿನಿ ಸಂತೆ

ಉಡುಪಿ: ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವಾನೋಪಾಯ ಅಭಿಯಾನ-ಸಂಜೀವಿನಿ ಸಹಯೋಗದಲ್ಲಿ ನಗರದ ಬನ್ನಂಜೆ ಬಾಲಭವನ ಆವರಣದಲ್ಲಿ ಪ್ರತೀ ಭಾನುವಾರದಂದು ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ಸಂಜೀವಿನಿ ಸಂತೆ ನಡೆಯಲಿದೆ.

ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ತಿಂಡಿ-ತಿನಿಸುಗಳು, ನೆಲಕಡಲೆ ಚಿಕ್ಕಿ, ಮೂಡೆ, ಆಯುರ್ವೇದಿಕ್ ಉತ್ಪನ್ನ, ಫಿನಾಯಿಲ್, ವಿವಿಧ ಬಗೆಯ ಸೊಪ್ಪು ಹಾಗೂ ತರಕಾರಿ, ಅಣಬೆ, ಒಣ ಮೀನು, ಸಾಂಬಾರ್ ಮತ್ತು ಚಟ್ನಿ ಪೌಡರ್, ಬಟ್ಟೆಯ ಮ್ಯಾಟ್, ತೆಂಗಿನ ಕಾಯಿ, ಮಡಿಕೆ, ಕೃತಕ ಆಭರಣ, ಇತ್ಯಾದಿ ಉತ್ಪನ್ನಗಳು ಸಂತೆಯಲ್ಲಿ ಲಭ್ಯವಿದ್ದು, ಪ್ರತಿ
ಭಾನುವಾರ ನಡೆಯುವ ಈ ಸಂತೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುವಂತೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.