ಮಲ್ಪೆ ತೇಲುವ ಸೇತುವೆ ಮುರಿದಿಲ್ಲ; ನಿರ್ವಹಣೆಗಾಗಿ ಸೇತುವೆ ಕಳಚಲಾಗಿದೆ: ನಿರ್ವಾಹಕರಿಂದ ಸ್ಪಷ್ಟನೆ

ಮಲ್ಪೆ: ಮಲ್ಪೆಯ ಫ್ಲೋಟಿಂಗ್ ಬ್ರಿಡ್ಜ್‌ನ್ನು ಎರಡು ತಿಂಗಳಿಗೊಮ್ಮೆ ನಿರ್ವಹಣೆ ಮಾಡುವ ಹಿನ್ನೆಲೆ ಬ್ರಿಡ್ಜ್‌ ಅನ್ನು ತೆರವುಗೊಳಿಸಲಾಗಿದೆ. ಆದರೆ ಫ್ಲೋಟಿಂಗ್ ಬ್ರಿಡ್ಜ್ ಮುರಿದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಫ್ಲೋಟಿಂಗ್ ಬ್ರಿಡ್ಜ್‌ನ ತಳಭಾಗದಲ್ಲಿ ಕಪ್ಪೆ ಚಿಪ್ಪು ಮೊದಲಾದವುಗಳು ಸೇರಿಕೊಳ್ಳುವುದರಿಂದ ಅದನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಹವಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಐದು ದಿನದವರೆಗೆ ಬಲವಾದ ಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಸೇತುವೆಯ ನಿರ್ವಹಣೆ ಮತ್ತು ಹವಮಾನ ಇಲಾಖೆಯ ಸೂಚನೆಯ ಹಿನ್ನೆಲೆ ಸೇತುವೆ ತೆಗೆಯಲಾಗಿದೆ ಹೊರತು ಸೇತುವೆ ತುಂಡಾಗಿಲ್ಲ ಎಂದು ಮಂತ್ರಾ ಟೂರಿಸಂ ಪ್ರಕಟಣೆಯಲ್ಲಿ ತಿಳಿಸಿದೆ.