ಕೇದಾರೋತ್ಥಾನ ಟ್ರಸ್ಟ್ (ರಿ.), ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ಈ ಬಾರಿ ಉಡುಪಿಯಲ್ಲಿ ಕೈಗೊಂಡಿರುವ 3ನೇ ವರ್ಷದ “ಹಡಿಲು ಭೂಮಿ ಕೃಷಿ” ಮಾಡಲು ಬೇಕಾದ ಭತ್ತದ ಚಾಪೆ ನೇಜಿ ತಯಾರಿಕಾ ಘಟಕ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿಯಲ್ಲಿ ನಿರ್ಮಿಸಲಾಗಿದ್ದು, ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷ, ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಇಂದು ಭೂ ಮಾತೆಗೆ ಹಾಲನ್ನು ಅರ್ಪಿಸಿ ಟ್ರಾಕ್ಟರ್ ಚಲಾಯಿಸಿ 3 ನೇ ವರ್ಷದ ಹಡಿಲು ಭೂಮಿ ಕೃಷಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿಕರಾದ ವನಜಾ ಜಯಕರ್, ಜುಲಿಯನ್ ದಾಂತಿ, ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಣೇಶ್, ಭೂ ಮಾಲಕರಾದ ಶಂಭು ಸನಿಲ್, ಸ್ಥಳೀಯರಾದ ರಿಕೇಶ್ ಹಾಗೂ ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.