ಹಲವು ದಿನಗಳಿಂದ ಎಲ್ಲೆಡೆ ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ಜೋಡಿಸುವಂತೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಅಲ್ಲದೆ ಇದಕ್ಕಾಗಿ ಗಡುವನ್ನು ನೀಡಲಾಗಿತ್ತು. ಇದೀಗ ಈ ಗಡುವು ಹತ್ತಿರ ಬರುತ್ತಿದ್ದಂತೆ ಈ ದಿನಾಂಕವನ್ನು ಇನ್ನೊಮ್ಮೆ ವಿಸ್ತರಿಸಬೇಕೆಂಬ ಬೇಡಿಕೆ ಹೆಚ್ಚಾಗ ತೊಡಗಿದೆ.
ಆದರೆ ಈ ವರ್ಷ ಈ ದಿನಾಂಕ ಇನ್ನೊಮ್ಮೆ ವಿಸ್ತರಿಸುವ ನಿರೀಕ್ಷೆ ಇಲ್ಲ. ಈಗಾಗಲೇ ಗಮನಿಸಿದರೆ PAN-Aadhaar ಜೋಡಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಿಂದ ಹಲವು ಬಾರಿ ದಿನಾಂಕಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ಇಲಾಖೆಯು ವಿಸ್ತರಿಸಿತ್ತು.
ಈ ಪ್ಯಾನ್- ಆಧಾರ್ ಲಿಂಕ್ ಇಲ್ಲಿಯವರೆಗೂ ಇನ್ನೂ ಲಿಂಕ್ ಮಾಡದೇ ಇರುವವರು ಅದನ್ನು ಈ ತಿಂಗಳು ಅಂದರೆ ಮಾರ್ಚ್ 31ರ ವರೆಗೂ ಮಾಡಬಹುದಾಗಿದೆ. ಈ ಅವಧಿಯೊಳಗೂ ಯಾರೇ ಆಗಲಿ ತಮ್ಮ ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡದೆ ಹೋದಲ್ಲಿ ಅವರ ಪಾನ್ ಸಂಖ್ಯೆಯು ಬರುವ ಏಪ್ರಿಲ್ 1, 2023 ರಿಂದ ನಿಷ್ಕ್ರಿಯಯವಾಗಲಿದೆ.
ಪ್ಯಾನ್ ಸಂಖ್ಯೆ ಒಂದೊಮ್ಮೆ ನಿಷ್ಕ್ರಿಯಗೊಂಡರೆ ಆ ವ್ಯಕ್ತಿಗೆ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಈ ರೀತಿ ರಿಟರ್ನ್ ಸಲ್ಲಿಸದೆ ಇದ್ದಾಗ ಆ ವ್ಯಕ್ತಿಯ ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆ ಸಕ್ರಿಯವಾಗುವುದೇ ಇಲ್ಲ. ಅಲ್ಲದೆ ಪ್ಯಾ ನ್ ಇಲ್ಲದೆ ಐಟಿಆರ್ ಸಲ್ಲಿಸಬಯಸುವವರು ಹೆಚ್ಚಿನ ದರ ತೆರಬೇಕಾಗುತ್ತದೆ.
ಪ್ಯಾನ್- ಆಧಾರ್ ಜೋಡಣೆ ಮಾಡಲು ಕೆಲವು ದಿನಗಳು ಅಂದರೆ ಮಾರ್ಚ್ 31 ರ ವರೆಗೆ ಕಾಲಾವಧಿಯಿದ್ದು ಅದನ್ನು ಈಗಲೇ ಮಾಡಿಬಿಡಿ ಹಾಗೂ ಮತ್ತೊಮ್ಮೆ ದಿನಾಂಕ ವಿಸ್ತರಣೆ ಆಗಬಹುದೆಂಬ ಮನಸ್ಥಿತಿಯಿಂದ ಹೊರಬನ್ನಿ.