ಮಾ.25ರ ವರೆಗೆ ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ

ಇಂದಿನಿಂದ ಮಾರ್ಚ್‌ 25ರವರೆಗೆ ಮೂರು ದಿನಗಳ ಕಾಲ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದಕ್ಕೆ ಕಾರಣ ಬಂಗಾಳಕೊಲ್ಲಿ ಮತ್ತು ಮಧ್ಯ ಅರೇಬಿಯನ್ ಸಮುದ್ರದ ಮೇಲೆ, ಎರಡು ಆಂಟಿ ಸೈಕ್ಲೋನ್ಗಳು ರೂಪುಗೊಂಡಿದ್ದುಜೊತೆಗೆ, ಜೊತೆಗೆ ಇತರ ಕೆಳಮಟ್ಟದ ಸೈಕ್ಲೋನಿಕ್ ಪರಿಚಲನೆಗಳು ರೂಪುಗೊಂಡಿದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು, ವಾಯುವ್ಯ ರಾಜಸ್ಥಾನ ಭಾಗದಿಂದ ಕರ್ನಾಟಕದವರೆಗಿನ ಪ್ರದೇಶಗಳಲ್ಲಿ ಹಾಗು ದೆಹಲಿ, ಪಂಜಾಬ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯಾಗಲಿದೆ. ಈ ಬಾರಿ ದೇಶದಲ್ಲಿ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.