ಬೈಲೂರು ಶ್ರೀ ಧೂಮಾವತಿ ದೈವಸ್ಥಾನ: ದೈವಸ್ಥಾನಕ್ಕೆ 15 ಸೆಂಟ್ಸ್ ಜಾಗವನ್ನು ನೀಡಿದ ದಾನಿ ಸದಾನಂದ ಶೆಟ್ಟಿ ಅವರಿಗೆ ಗೌರವ

ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಸಂಬಂದಿಸಿದ 5 ಗ್ರಾಮಗಳಾದ ಬೈಲೂರು, ಮಾರ್ಪಳ್ಳಿ, ಚಿಟ್ಪಾಡಿ, ಕೊರಂಗ್ರಪಡಿ, ಕೆಮೊತ್ತುರು ಮಾಗಣೆಗೆ ಒಳಪಟ್ಟ ಮೂಲ ಮಹಿಷಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ಶಿಲಾಮಯ ಆಲಯದಲ್ಲಿ ಹನುಮಾನ್ ರಸ್ತೆಯ 76 ಬಡುಗುಬೆಟ್ಟಿನ ಬೈಲೂರು ನಲ್ಲಿಶುಕ್ರವಾರ ಬೆಳ್ಳಿಗೆ ಪ್ರತಿಷ್ಠಾಪನೆ ಮಾಡಲಾಯಿತು.

ಧಾರ್ಮಿಕ ಪೂಜಾ ವಿಧಾನಗಳನ್ನು ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ತಂತ್ರಿಗಳಾದ ಶ್ರೀ ರಮಣ ತಂತ್ರಿ, ಕೃಷ್ಣಮೂರ್ತಿ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಭಟ್ ಹಾಗೂ ಅರ್ಚಕ ವೃಂದ ನೆಡೆಸಿಕೊಟ್ಟರು.

ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ 7 ಸಾವಿರ ಕ್ಕೂ ಮಿಕ್ಕಿ ಭೋಜನ ಪ್ರಸಾದ ಸ್ವಕರಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉಡುಪಿ ಶಾಸಕ ರಘುಪತಿ ಭಟ್ ದೀಪ ಬೆಳಗಿ ಚಾಲನೆ ನೀಡಿದರು. ಬೈಲೂರು ದೇವಳದ ಮೊಕ್ತೇಶ್ವರ ಮೋಹನ್ ಮುದ್ದಣ ಶೆಟ್ಟಿ, ದೈವಜ್ಞ ಮಾಧವನ್ ಪೊದುವಾಳ್, ರಮೇಶ ಶೆಟ್ಟಿ, ನವೀನ ಭಂಡಾರಿ, ಯುವ ಉಧ್ಯಮಿ ಗಳಾದ ಭರತ್ ಶೆಟ್ಟಿ, ಶಶಿಧರ್ ಶೆಟ್ಟಿ, ನಗರ ಸಭಾ ಸದಸ್ಯರಾದ ಕೃಷ್ಣ ರಾವ್ ಕೊಂಡಚ, ವಿಜಯ ಪೂಜಾರಿ, ಅರುಣ ಶೆಟ್ಟಿಗಾರ್, ಸುರ್ದಶನ್ ಶೇರಿಗಾರ್, ಜಯಕರ ಶೆಟ್ಟಿ ಇಂದ್ರಾಳಿ, ಪ್ರಮೋದ್ ಮಾದ್ವರಾಜ್, ದಿನೇಶ್ ಶೆಟ್ಟಿ, ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥರಿದ್ದರು.

ದೇವಸ್ಥಾನಕ್ಕೆ 15 ಸೆಂಟ್ಸ್ ಜಾಗವನ್ನು ನೀಡಿದ ದಾನಿ ಬೈಲೂರು ಮೂಡುಮನೆಯ ಸದಾನಂದ ಶೆಟ್ಟಿ ಮನೆಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ವಿಶೇಷ ರೀತಿಯಲ್ಲಿ ಸಹಕಾರ ನೀಡಿದ 18 ದಾನಿ ಗಳನ್ನೂ ಗೌರವಿಸಲಾಯಿತು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿದರು. ಕಿರಣಕುಮಾರ್ ಬೈಲೂರು ವಂದಿಸಿದರು. ನಮೃತ್ ರಾಕೇಶ್ ಶೆಟ್ಟಿ, ಸತೀಶ್ ಹೊಸ್ಮರ್ ಕಾರ್ಯಕ್ರಮ ನಿರೂಪಿಸಿದರು.