ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್: ಗವರ್ನರ್ ಭೇಟಿ, ವಿವಿಧ ಯೋಜನೆಗಳ ಲೋಕಾರ್ಪಣೆ

ಉದ್ಯಾವರ: ಲಯನ್ಸ್ ಜಿಲ್ಲಾ 317c ಇದರ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಗೆ ಲಯನ್ಸ್ ಜಿಲ್ಲೆಯ ಗವರ್ನರ್ ಲ. ಡಾ. ಎಂ ಕೆ ಭಟ್ ಎಂ ಜೆ ಎಫ್ ಅಧಿಕೃತ ಭೇಟಿ ನೀಡಿದ್ದು, ವಿವಿಧ ಸಮಾಜಮುಖಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಐದು ವರ್ಷಗಳ ಹಿಂದೆ ಆರಂಭಗೊಂಡಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವಿವಿಧ ಜನ ಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ತನ್ನದೇ ಆದ ಯಶಸ್ವಿಯ ಮೈಲುಗಲ್ಲನ್ನು ಇಟ್ಟಿದೆ. ಪ್ರಸ್ತುತ ವರ್ಷ ಲ. ಅನಿಲ್ ಲೋಬೊ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದು, ವಿವಿಧ ಸಮಾಜಮುಖಿ ಯೋಜನೆಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಶ್ರಮವಹಿಸಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ. ಎಂ ಕೆ ಭಟ್ ತಿಳಿಸಿದರು.

ಉದ್ಯಾವರ ಬಲಾಯಿಪಾದೆ ರಿಕ್ಷಾ ನಿಲ್ದಾಣ ಬಳಿ ಗವರ್ನರ್ ರವರನ್ನು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಸದಸ್ಯರು ಸ್ವಾಗತಿಸಿದ್ದು, ಬಳಿಕ ವಾಹನ ಮೆರವಣಿಗೆಯ ಮೂಲಕ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದಲ್ಲಿ ಅಳವಡಿಸಿರುವ ವಾಟರ್ ಪ್ಯೂರಿಫೈ ಉದ್ಘಾಟಿಸಿದರು. ಬಳಿಕ ಹಿರಿಯ ನಾಗರಿಕರ ಕನಸಿನ ಮನೆಗೆ ಭೇಟಿ ನೀಡಿ ಅಲ್ಲಿಗೆ ಅಗತ್ಯವಿರುವ ಫ್ರಿಜ್ ಹಾಗೂ ಪಲ್ಲೋಟೈನ್ ಸ್ನೇಹಲಯಕ್ಕೆ ಕ್ಲಬ್ಬಿನ ವತಿಯಿಂದ ವಿವಿಧ ದಿನಬಳಕೆಯ ವಸ್ತುಗಳನ್ನು ಹತ್ತಾಂತರಿಸಿದರು. ಮೇಲ್ಪೇಟೆ ಬಿಲ್ಲವ ಮಹಾಜನ ಸಂಘದ ಸಮೀಪದ ಪ್ರಮುಖ ರಸ್ತೆಯ ಬದಿಯಲ್ಲಿ ಇರುವ ಕೆರೆಗೆ ತಡೆಗೋಡೆಯನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಅಸೌಖ್ಯದಲ್ಲಿರುವ ದಂಪತಿಗಳಿಗೆ ವೀಲ್ ಚೇರ್ ಹಸ್ತಾಂತರಿಸಿದ ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷೆ ಲಯನ್ ವಿಜಯ ಗೋಪಾಲ ಬಂಗೇರ, ವಲಯಾಧ್ಯಕ್ಷ ಜಾನ್ ಫೆರ್ನಾಂಡಿಸ್, ಕ್ಯಾಬಿನೆಟ್ ಸದಸ್ಯ ಲಯನ್ ಗಾಡ್ಫ್ರೀ ಡಿಸೋಜಾ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಅನಿಲ್ ಲೋಬೊ ಸ್ವಾಗತಿಸಿದರೆ, ಕೋಶಾಧಿಕಾರಿ ಲ. ರೋಷನ್ ಕ್ರಾಸ್ಟೊ ಧನ್ಯವಾದ ಸಮರ್ಥಿಸಿದರು. ಕಾರ್ಯದರ್ಶಿ ಲಯನ್ ಸ್ಟೀವನ್ ಕುಲಾಸೊ ವರದಿ ವಾಚಿಸಿದರೆ, ಲ. ಅನಿಲ್ ಮಿನೇಜಸ್ ಮತ್ತು ಲ. ಮೈಕಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.