ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ದೋಟ ಹಾಗೂ ಸಂಗಬೆಟ್ಟು ಗ್ರಾಮದ ಮಂಜನ್‌ದೊಟ್ಟುವಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಡ್ಯಾಮ್ ಕಾಮಗಾರಿಯನ್ನು ಶುಕ್ರವಾರ
ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ವೀಕ್ಷಿಸಿದರು.
ಈ ಸಂದರ್ಭ ಮಾತನಾಡಿದ ಅವರು ೩ ಜಿಲ್ಲೆಗೆ ಸೇರಿರುವ ಈ ಪಶ್ಚಿಮ ವಾಹಿನಿ ಯೋಜನೆ ಸುಮಾರು ೨೬೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ೮೦ ಕೋಟಿ ಉಡುಪಿ ಜಿಲ್ಲೆಗೆ ಉತ್ತರ ಕನ್ನಡ ಜಿಲ್ಲೆಗೆ ೩೫ ಜೋಟಿ ಅನುದಾನ ಬಿಡುಗಡೆಗೊಂಡಿದೆ. ಒಟ್ಟು ೧೧ ಡ್ಯಾಂ ನಿರ್ಮಾಣಗೊಳ್ಳುತ್ತಿದೆ. ಇದು ನಮ್ಮ ಕನಸಿನ ಯೋಜನೆಯಾಗಿದೆ ಎಂದರು.
ಈ ೩ ಡ್ಯಾಂಗಳು ಮಾಜಿ ಸಚಿವ ರೈ ವ್ಯಾಪ್ತಿಗೆ ಒಳಪಡುತ್ತಿದ್ದು, ಕ್ರಮವಾಗಿ ೧೨ಕೋಟಿ, ೧೫ ಕೋಟಿ ಹಾಗೂ ೧೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.