ಉಡುಪಿ, ಜೂನ್ 14: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಉಡುಪಿ ಮತ್ತು ಮಂಗಳೂರಿನಲ್ಲಿ 2018-19ನೇ ಸಾಲಿನಲ್ಲಿ ಪ್ರವೇಶಾತಿ ಹೊಂದಿರುವ ಪ್ರಥಮ ಬಿ.ಎ/ಬಿ.ಕಾಂ/ಬಿ.ಲಿಬ್.ಐ.ಎಸ್ಸಿ/ಎಂ.ಕಾಂ/ಎಂ.ಲಿಬ್.ಐಎಸ್ಸಿ ಮತ್ತು ಎಂಸ್ಸಿ(ಪ್ರಥಮ ಸಿಮಿಸ್ಟರ್) ವಿದ್ಯಾರ್ಥಿಗಳಿಗೆ ಮತ್ತು 2011-12 ಮತ್ತು 2012-13ರಲ್ಲಿ ಬಿ.ಎ/ಬಿ.ಕಾಂ ಗೆ ಪ್ರವೇಶಾತಿ ಹೊಂದಿ ಅನುತೀರ್ಣಗೊಂಡಿರುವ ಅಥವಾ ಪರೀಕ್ಷೆಯನ್ನು ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ ಜುಲ್ಯೆ 12 ರಿಂದ ಕರಾಮುವಿಯ ಪರೀಕ್ಷೆಗಳು ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯುತ್ತವೆ. ವಿದ್ಯಾರ್ಥಿಗಳು ಆನ್‍ಲ್ಯೆನ್ ಮತ್ತು ಆಪ್‍ಲ್ಯೆನ್ ಎರಡು ವಿಧದಲ್ಲೂ ಪರಿಕ್ಷೆಯನ್ನು ಕಟ್ಟಬಹುದಾಗಿದೆ. ಪರೀಕ್ಷೆ ಬಗೆಗಿನ ಮಾಹಿತಿಗಾಗಿ ಕರಾಮುವಿ ವೆಬ್‍ಸ್ಯೆಟ್ www.ksoumysore.karnataka.gov.in ವೀಕ್ಷಿಸಿ ಆನ್‍ಲ್ಯೆನ್‍ನಲ್ಲಿ ಪರೀಕ್ಷೆ ಕಟ್ಟಬಹುದು. ಆಪ್‍ಲ್ಯೆನ್‍ನಲ್ಲಿ ಪರೀಕ್ಷೆ ಕಟ್ಟುವವರು ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಾ ಅರ್ಜಿ ಮತ್ತು ಬ್ಯಾಂಕ್ ಚಲನ್ ಪಡೆದು ಬ್ಯಾಂಕ್‍ನಲ್ಲಿ ಹಣ ಸಂದಾಯ ಮಾಡಬಹುದು. ಆನ್‍ಲ್ಯೆನ್ ಮತ್ತು ಆಪ್‍ಲ್ಯೆನ್‍ನಲ್ಲಿ ಪರೀಕ್ಷೆ ಶುಲ್ಕ ಕಟ್ಟಿದ ವಿದ್ಯಾರ್ಥಿಗಳು ಅರ್ಜಿಯನ್ನು ಎನ್.ಬಿ. ಕುಮಾರ್ ಉಪಕುಲಸಚಿವರು. ಪರೀಕ್ಷಾ ವಿಭಾಗ, ಕರಾಮುವಿ. ಮುಕ್ತ ಗಂಗೋತ್ರಿ. ಮ್ಯೆಸೂರು, ಇಲ್ಲಿಗೆ ಜೂನ್ 29 ರ ಒಳಗೆ ಕಳುಹಿಸಬೇಕು.
2012-13ರ ಬಿ.ಎ/ಬಿ.ಕಾಂ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ, ಮತ್ತು ತೃತೀಯ ವರ್ಷಗಳಿಗೆ ಪ್ರತ್ಯೇಕ ಶುಲ್ಕವನ್ನು ಕಟ್ಟಿ ಅರ್ಜಿ ಸಲ್ಲಿಸಬೇಕು. 2011-12 ರಲ್ಲಿ ಪ್ರವೇಶಾತಿ ಹೊಂದಿರುವ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳಿಗೆ ಇದು ಅಂತಿಮ ಅವಕಾಶವಾಗಿರುತ್ತದೆ. ದಂಡ ಶುಲ್ಕವಿಲ್ಲದೆ ಪ್ರವೇಶಾತಿಗೆ ಜೂನ್ 19 ಕೊನೆಯ ದಿನವಾಗಿರುತ್ತದೆ. 200 ರೂ. ದಂಡ ಶುಲ್ಕದೊಂದಿಗೆ ಪರೀಕ್ಷೆ ಕಟ್ಟಲು ಕೊನೆಯ ದಿನ ಜೂನ್ 29. ಪರೀಕ್ಷಾ ವೇಳಾ ಪಟ್ಟಿಯನ್ನು ವ್ಯೆಬ್‍ಸ್ಯೆಟ್ ಪ್ರಕಟಿಸಲಾಗುವುದು ಎಂದು ಉಡುಪಿ ಕರಾಮುವಿ ಪ್ರಾದೇಶಿಕ ನಿರ್ದೇಶಕ ಡಾ. ಕೆ.ಪಿ. ಮಹಾಲಿಂಗಯ್ಯ ಕಲ್ಕುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.