ಕಾರ್ಕಳ: ಜನರಿಗೆ ಉತ್ತಮ ಸೇವೆಯನ್ನು ನೀಡಲು ಸಹಕಾರಿ ಕ್ಷೇತ್ರ ಸದಾ ಸಿದ್ಧವಿದೆ. ಸೇವೆಗೆ ಉತ್ತಮ ಹೆಸರು ಇದ್ದರೆ, ಅದು ಸಹಕಾರಿ ಕ್ಷೇತ್ರದಲ್ಲಿ ಮಾತ್ರ. ಸಹಕಾರಿ ಕ್ಷೇತ್ರಗಳು ವಿಕಸನಗೊಳ್ಳುತ್ತಿದೆ. ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾನಾಪಾಟೇಕರ್ ಸಭಾಭವನದಲ್ಲಿ ಜರುಗಿದ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಿಸ್ತರಣಾ ನವೀಕರಣ ಕಟ್ಟಡ ಸಮೃದ್ಧಿ ಸಹಕಾರಿ ಸೌಧದ ಉದ್ಘಾಟನಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರಿ ಸಂಘದ ವಿಸ್ತರಣಾ ನವೀಕರಣ ಕಟ್ಟಡ ಸಮೃದ್ಧಿ ಸಹಕಾರಿ ಸೌಧವನ್ನು ಸಚಿವ ವಿ. ಸುನಿಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಭದ್ರತಾ ಕೊಠಡಿಯನ್ನು, ಹವಾನಿಯಂತ್ರಿತ ಬ್ಯಾಂಕಿಂಗ್ ಕಚೇರಿ, ಗೃಹಬಳಕೆ ವಿಭಾಗ, ನವೋದಯ ಸಹಕಾರಿ ಭವನವನ್ನು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ರಸಗೊಬ್ಬರ ವಿಭಾಗ, ದ.ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಪಡಿತರ ವಿಭಾಗ, ಮುಂಡ್ಕೂರು ದೊಡ್ಡ ಮನೆ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ.ಎನ್.ಎಸ್. ಶೆಟ್ಟಿ ಮುಂಡ್ಕೂರು ಅವರು ಆಡಳಿತ ಕಛೇರಿ ಉದ್ಘಾಟಿಸಿದರು.
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಮದಾಸ ಆಚಾರ್ಯ, ಮುಂಡ್ಕೂರು ಚರ್ಚ್ ಧರ್ಮಗುರು ರೆ.ಫಾ.ರೊನಾಲ್ಡ್ ಮಿರಾಂದ, ಮುಂಡ್ಕೂರು ಆರ್ ಜೆಎಂ ಖತೀಬ್ ಹಾರಿಸ್ ಮದನಿ, ಮುಂಡ್ಕೂರು ಗ್ರಾಪಂ ಅಧ್ಯಕ್ಷೆ ಸುಶೀಲಬಾಬು, ಇನ್ನಾ ಗ್ರಾಪಂ ಅಧ್ಯಕ್ಷ ಕುಶ ಆರ್. ಮೂಲ್ಯ, ಮುಂಡ್ಕೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ಎಂ. ಶೆಟ್ಟಿ, ಮುಂಡ್ಕೂರು ವಿಠೋಭ ದೇವಸ್ಥಾನದ ಮೊಕ್ತೇಸರ ವೆಂಕಟೇಶ್ ಕಾಮತ್, ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ, ಕಜೆ ಮಾರಿಗುಡಿ ದೇವಸ್ಥಾನದ ಗೌರವಾಧ್ಯಕ್ಷ ಎಂ.ಜಿ.ಕರ್ಕೇರ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಕುಮಾರ್ ಶೆಟ್ಟಿ, ಪ್ರಗತಿಪರ ಕೃಷಿಕ ಸುಭೋದ ಶೆಟ್ಟಿ ಸಚ್ಚೇರಪರಾಡಿ, ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಮೆಲ್ಲೊ, ನಿರ್ದೇಶಕರಾದ ಪ್ರವೀಣ್ ಶೆಟ್ಟಿ ಇನ್ನಾ, ಮುಹಾಬಲ ಪೂಜಾರಿ, ಅಮರನಾಥ ಶೆಟ್ಟಿ ಇನ್ನಾ, ಉಮೇಶ್ ಶೆಟ್ಟಿ, ಪುರುಷೋತ್ತಮ ಪೂಜಾರಿ, ಅಶೋಕ ಶೆಟ್ಟಿ ಖಂಡಿಗ, ಸಂಜೀವ, ಅನಸೂಯ ಸುಧಾಕರ ಶೆಟ್ಟಿ, ಲತಾ ಭಟ್ ಪೊಸ್ರಾಲು, ಲೀಲಾ, ಜಯಂತ್ ಕುಮಾರ್ ಉಪಸ್ಥಿತರಿದ್ದರು.
ನಮಿತಾ ಬೋಳ ಪ್ರಾರ್ಥಿಸಿದರು. ವಿಎಸ್ಎಸ್ ಸಂಘದ ಅಧ್ಯಕ್ಷ ಎಂ.ವಾದಿರಾಜ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ವರದಿ ವಾಚಿಸಿದರು. ಸಾಯಿನಾಥ್ ಶೆಟ್ಟಿ ಮುಂಡ್ಕೂರು, ಶರತ್ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಸಂಗೀತಾ ಕುಲಾಲ್ ಬೋಳ ನಿರೂಪಿಸಿದರು. ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಮೆಲ್ಲೊ ವಂದಿಸಿದರು.