ಉಡುಪಿ: ರಾಷ್ಟ್ರಕಂಡ ಮೇರು ವ್ಯಕ್ತಿತ್ವದ ಶಿವಾಜಿ ಮಹಾರಾಜರ ಧೈರ್ಯ, ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಮುನ್ನಡೆಸಿದಾಗ ಸಮಗ್ರ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಶಿವಾಜಿಯನ್ನು ಬೆಂಬಲಿಸುವ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗಬೇಕಿದೆ ಎಂದು ಉಡುಪಿಯ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ನ್ಯಾಯವಾದಿ ದಿನೇಶ್ ಸಿ. ನಾಯ್ಕ್ ತಿಳಿಸಿದ್ದಾರೆ. ಉಡುಪಿ ಕೋರ್ಟ್ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ತಿಥಿಯಾನುಸರವಾಗಿ ಶಿವಾಜಿ ಜಯಂತಿ ಯನ್ನು ಆಚರಿಸಿ ಮಾತನಾಡಿದರು. ಈ ಸಂದರ್ಭ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರ ಎಚ್ ನಾಯ್ಕ್ ಮಾತನಾಡಿ, ನಮ್ಮ ದೇಶವನ್ನು ರಕ್ಷಣೆ ಮಾಡಲು ಹುಟ್ಟಿ ಬಂದ ಶಿವಾಜಿ ಮಹಾರಾಜರ ಚಾಣಾಕ್ಷಮತಿಯುಳ್ಳ ವಿವಿಧ ಯುದ್ಧ ಕೌಶಲಗಳು ಶತ್ರುಗಳ ಬೆವರಿಸುವಂತೆ ಮಾಡಿತ್ತು.ಶಿವಾಜಿ ಹುಟ್ಟಿನಿಂದಲೂ ಧೈರ್ಯ ವಂತನಾಗಿದ್ದರು ಎಂದರು.
ಸಂಘದ ಉಪಾಧ್ಯಕ್ಷ ರಾದ ಲಕ್ಷ್ಮಣ ನಾಯ್ಕ್, ನಿರ್ದೇಶಕರಾದ ಆರ್ ಸಿ ನಾಯ್ಕ್, ರಘುನಾಥ್ ನಾಯ್ಕ್, ಸತೀಶ್ ನಾಯ್ಕ್, ಗಣೇಶ್ ನಾಯ್ಕ್,ಸುರೇಶ ಅಮೀನ್, ಕರುಣಾಕರ ಕಾಂಚನ, ವಿವಿಧ ಸಹಕಾರಿ ಸಂಘಗಳ ಸಿ. ಇ ಓ ಗಳಾದ ಪ್ರಕಾಶ್ ಸುವರ್ಣ ಕಟಪಾಡಿ, ಲೋಹಿತ್ ಸಾಲಿಯಾನ್, ರವೀಶ್ ನಾಯ್ಕ್, ಸದಾಶಿವ ಶೆಟ್ಟಿ ಹಾಗೂ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಸ್ವಾಗತಿಸಿ, ವಂದಿಸಿದರು.